More

    ಧಾರವಾಡಕ್ಕೆ ಆಗಮಿಸಿದ ಕನ್ನಡ ರಥ

    ಹುಬ್ಬಳ್ಳಿ: ಎಂಬತ್ತಾರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. 6ರಿಂದ 8ರ ವರೆಗೆ ಹಾವೇರಿಯಲ್ಲಿ ವಿಶಿಷ್ಟವಾಗಿ ಆಚರಿಸುವ ಸಲುವಾಗಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥವು ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಶುಕ್ರವಾರ ಸಂಜೆ ಧಾರವಾಡಕ್ಕೆ ಆಗಮಿಸಿದ ಸಂದರ್ಭದಲ್ಲಿ ಧಾರವಾಡ ಟೋಲ್​ನಾಕಾ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಅಭಿಮಾನಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ರಥವನ್ನು ಬರಮಾಡಿಕೊಳ್ಳಲಾಯಿತು.

    ಶ್ರೀ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿದ ತಾಲೂಕು ಕಸಾಪ ಅಧ್ಯಕ್ಷ ಗುರುಸಿದ್ದಪ್ಪ ಎಂ. ಬಡಿಗೇರ, ಕನ್ನಡ ನಾಡು ನುಡಿ ಸಂಸ್ಕೃತಿಯ ಅಸ್ಮೀತೆಯ ಸಂಕೇತವಾದ ಭುವನೇಶ್ವರಿ ದೇವಿಯನ್ನು ಎಲ್ಲ ಕನ್ನಡಿಗರೂ ಆರಾಧಿಸಬೇಕೆಂದರು.

    ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು, ಕನ್ನಡ ರಥದಲ್ಲಿನ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸಿ ಕನ್ನಡ ತಾಯಿಯು ಸಮಸ್ತ ಕನ್ನಡಿಗರ ಆರಾಧ್ಯ ದೈವವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರು ಕನ್ನಡ ಜೊ್ಯೕತಿಯೊಂದಿಗೆ ಕನ್ನಡಮ್ಮನ ರಥವನ್ನು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅದೇ ಜ್ಯೋತಿಯಿಂದ ಹಾವೇರಿಯಲ್ಲಿ ಜರುಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೆ್ಮೕಳನವನ್ನು ಉದ್ಘಾಟಿಸುವುದಾಗಿ ಹೇಳಿದ್ದಾರೆ ಎಂದರು.

    ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಮಾಜಿ ಸಂಸದ ಐ.ಜಿ. ಸನದಿ ಅವರು ದೇವಿಗೆ ನಮಿಸಿದರು.

    ವೆಂಕಟೇಶ್ ಮರೇಗುದ್ದಿ, ಕವಿಯಿತ್ರಿ ಸಂಧ್ಯಾ ದೀಕ್ಷಿತ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ, ಪ್ರೊ. ಜಿನದತ್ತ ಹಡಗಲಿ, ಹುಬ್ಬಳ್ಳಿ ನಗರ ಕಸಾಪ ಘಟಕದ ಪದಾಧಿಕಾರಿಗಳಾದ ಈರಣ್ಣ ಎಮ್ಮಿ, ಕಲ್ಲಪ್ಪ ಗುಡಿಮನಿ, ಅಶೋಕ ಸನ್ನಿ, ಸುನೀತಾ ಹುಬಳಿಕರ, ಗಿರಿಜಾ ಚಿಕ್ಕಮಠ, ಪದ್ಮಜಾ ಉಮರ್ಜಿ, ಶಂಕರಗೌಡ ಸಾತ್ಮಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

    ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕನ್ನಡ ರಥವನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನಕ್ಕೆ ಕೊಂಡೊಯ್ಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts