More

    ಧರ್ಮಸ್ಥಳ ಯೋಜನೆ ಮೂಲಕ ಗಾಂಧೀಜಿ ಕನಸು ಸಾಕಾರ; ಮಹಿಳೆಯರಿಗೆ ಸ್ವಾವಲಂಬಿ ಬದುಕು: ಡಾ. ಶ್ರೀ ಮಹಾಂತ ಸ್ವಾಮೀಜಿ

    ಸೊರಬ: ವೀರೇಂದ್ರ ಹೆಗ್ಗಡೆ ಅವರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಾತ್ಮ ಗಾಂಧೀಜಿ ಅವರ ಗ್ರಾಮಾಭಿವೃದ್ಧಿಯ ಕನಸು ಸಾಕಾರಗೊಳ್ಳುವಂತಾಗಿದೆ ಎಂದು ಜಡೆ ಹಾಗೂ ಸೊರಬ ಮರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
    ಸೋಮವಾರ ತಾಲೂಕಿನ ಛತ್ರದಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾವಲಿ ವಲಯದ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟಗಳ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
    ಸರ್ವರ ಶ್ರೇಯೋಭಿವೃದ್ಧಿಗಾಗಿ ಧರ್ಮಸ್ಥಳ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡಲಾಗಿದೆ. ಮಂಜುನಾಥ ಸ್ವಾಮಿಯೇ ಪೂಜ್ಯರ ರೂಪದಲ್ಲಿ ಗ್ರಾಮಗಳಿಗೆ ಸೌಲಭ್ಯಗಳನ್ನು ಕೊಡುತ್ತಿದ್ದು ಲಿಂಗ ಮುಖೇನ ಜಂಗಮ ಎನ್ನುವ ರೀತಿ ಮಂಜುನಾಥ ಸ್ವಾಮಿಯ ಪ್ರತೀಕವಾಗಿ ಪೂಜ್ಯರು ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮದಲ್ಲಿರುವ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಪೂರಕವಾದ ಸೌಲಭ್ಯಗಳನ್ನು ಯೋಜನೆ ನೀಡುತ್ತಿದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
    ಜಿಲ್ಲಾ ನಿರ್ದೇೀಶಕ ಬಾಬುನಾಯ್ಕ ಮಾತನಾಡಿ, ನ್ಯಾಯ, ನೀತಿ, ಸಹಬಾಳ್ವೆ ಒಗ್ಗಟ್ಟು ಈ ಭಾವನೆಗಳನ್ನು ಬೆಳೆಸುವುದು ನಮ್ಮ ಯೋಜನೆಯ ಗುರಿಯಾಗಿದೆ. ಎಲ್ಲರಲ್ಲೂ ಏಕತೆಯ ಭಾವನೆಯನ್ನು ಬೆಳೆಸುವುದಕ್ಕಾಗಿಯೇ ಇಂತಹ ವಿಶೇಷ ಸಾಮೂಹಿಕ ಕಾರ್ಯಕ್ರಮಗಳನ್ನು ಯೋಜನೆ ನಡೆಸುತ್ತಿದೆ ಎಂದರು.
    ವಿವಿಧ ಕಲಾ ತಂಡ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts