More

    ಧರೆಗೆ ಉರುಳುತ್ತಿರುವ ಹಳೇ ಮರಗಳು

    ಕೊಡೇಕಲ್ : ನಾರಾಯಣಪುರ ಕ್ಯಾಂಪಸ್‌ನಲ್ಲಿರುವ ಹಳೆಯ ಮರುಗಳು ಬಿರುಗಾಳಿಗೆ ಧರೆಗೆ ಉರುಳುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಆಂತಕ ಪಡುವಂತಾಗಿದೆ. ಹೀಗಾಗಿ ಕೂಡಲೇ ಈ ಮರಗಳನ್ನು ತೆರವುಗೊಳಿಸಬೇಕು ಎಂದು ಇಲ್ಲಿನ ಜನರ ಒತ್ತಾಯವಾಗಿದೆ.

    ಒಂದು ಕಾಲದಲ್ಲಿ ಸಮೃದ್ಧವಾಗಿ ಬೆಳೆದು ಕ್ಯಾಂಪ್ ಪ್ರದೇಶದ ಜನರಿಗೆ ನೆರಳು ನೀಡುತ್ತಾ ತನ್ನ ಸೌಂದರ್ಯ ಹೆಚ್ಚಿಸಿದ್ದ ಮರಗಳು ಇಂದು ಹಳೆಯದಾಗಿ ಜನರಿಗೆ ಭೀತಿಯನ್ನುಂಟು ಮಾಡಿದೆ.

    ಕೃಷ್ಣಾ ಭಾಗ್ಯ ಜಲ ನಿಗಮದ ಕ್ಯಾಂಪ್ ಪ್ರದೇಶದ ವಸತಿ ಗೃಹಗಳ ಸಮುಚ್ಚಯದಲ್ಲಿರುವ ಹಲವಾರು ಮರಗಳು ಹಳೆಯದಾಗಿದ್ದು, ಜೋರಾದ ಗಾಳಿಗೆ ಈಗಲೋ ಆಗಲೋ ಬೀಳುವಂತಾಗಿದ್ದರಿAದ ಜನರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಹಳೆಯ ಮರಗಳನ್ನು ತೆರವುಗೊಳಿಸಿ ಮತ್ತೆ ಹೊಸ ಮರಗಳನ್ನು ನೆಡಬೇಕು ಎಂದು ಆಗ್ರಹಿಸಿದ್ದಾರೆ.

    ಗಗನಚುಂಬಿಸುವAತೆ ಬೆಳೆದಿರುವ ೩೦ ವರ್ಷಗಳ ಹಳೆಯದಾಗಿರುವ ೧೨೩ಕ್ಕೂ ಹೆಚ್ಚು ಮರಗಳು ಧರೆಗುರುಳುವ ಸ್ಥಿತಿಯಲ್ಲ್ಲಿವೆ. ಇತ್ತೀಚೆಗೆ ಜೋರಾಗಿ ಬೀಸಿದ ಬಿರುಗಾಳಿಗೆ ಕೆಲ ಮರಗಳು ಉರುಳಿದ್ದರಿಂದ ಹಲವು ಮನೆಗಳ ಛಾವಣಿ ಮೇಲೆ ಬಿದ್ದಿವೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಓಡಾಡುವ ವೇಳೆ ಮರಗಳು ಬಿದ್ದರೆ ಜೀವಕ್ಕೆ ಅಪಾಯ ಎನ್ನುವಂತಿವೆ.

    ಅಪಾಯ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಹಳೆಯ ಮರಗಳನ್ನು ತೆರವುಗೊಳಿಸಿ ಕ್ಯಾಂಪ್ ನಿವಾಸಿಗಳ ಆತಂಕ ದೂರ ಮಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts