More

    ಧರಣಿ ಮುಕ್ತಾಯಗೊಳಿಸಿದ ನಗರಸಭೆ ಸದಸ್ಯರು

    ರಾಣೆಬೆನ್ನೂರ: ನಗರದಲ್ಲಿ ನಡೆಯುತ್ತಿರುವ 24*7 ಕುಡಿಯುವ ನೀರು ಸರಬರಾಜು ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಇಲ್ಲಿಯ ನಗರಸಭೆ ಎದುರು ಕಾಂಗ್ರೆಸ್ ಸದಸ್ಯರು ಹಮ್ಮಿಕೊಂಡಿದ್ದ ಧರಣಿಯನ್ನು ಕಳಪೆ ಕಾಮಗಾರಿಯನ್ನು ಸರಿಪಡಿಸುವ ಕುರಿತು ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮುಕ್ತಾಯಗೊಳಿಸಿದರು.

    ಸದಸ್ಯರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆ ಅಧಿಕಾರಿ ಉಮೇಶ ಮುತ್ತಪ್ಪನವರ ಹಾಗೂ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಭೇಟಿ ನೀಡಿ ಸದಸ್ಯರ ಸಮಸ್ಯೆ ಆಲಿಸಿದರು. ಕಳಪೆಯಾಗಿರುವ ಕಡೆಗಳಲ್ಲಿ ಕೂಡಲೇ ದುರಸ್ತಿ ಕಾರ್ಯ ಮಾಡಿಸಲಾಗುವುದು. ಅಲ್ಲಿಯವರೆಗೆ ಹೊಸ ಕಾಮಗಾರಿ ನಡೆಸುವುದಿಲ್ಲ ಎಂದು ಭರವಸೆ ನೀಡಿ, ಧರಣಿ ಮುಕ್ತಾಯಗೊಳಿಸಲು ಮನವೊಲಿಸಿದರು. ಇದಕ್ಕೆ ಸಮ್ಮತಿಸಿದ ಸದಸ್ಯರು ಧರಣಿ ಹಿಂತೆಗೆದುಕೊಂಡರು.

    ಈ ಕುರಿತು ಸದಸ್ಯ ಲಿಂಗರಾಜ ಕೋಡಿಹಳ್ಳಿ ಮಾತನಾಡಿ, ಅಧಿಕಾರಿಗಳು ಹೇಳಿದಂತೆ ನಡೆದುಕೊಳ್ಳಬೇಕು. ಮಾತು ತಪ್ಪಿ ಹೊಸ ಕಾಮಗಾರಿ ಆರಂಭಿಸಿದರೆ, ಮುಂದಿನ ದಿನದಲ್ಲಿ ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

    ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕರ, ಶೇಖಪ್ಪ ಹೊಸಗೌಡರ, ನೂರಲ್ಲಾ ಖಾಜಿ, ಮೆಹಬೂಬ್ ಮುಲ್ಲಾ, ರಮೇಶ ಬೀಸಲಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts