More

    ದ್ವಿಪಥ ರೈಲು ಮಾರ್ಗ ಕಾಮಗಾರಿ ನಿಲ್ಲಿಸಲು ಆಗ್ರಹ

    ಹುಬ್ಬಳ್ಳಿ: ಗೋವಾದಲ್ಲಿ ದ್ವಿಪಥ ರೈಲು ಮಾರ್ಗ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಆ ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ನಗರದ ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರ ಮುಖ್ಯ ಕಚೇರಿ ರೈಲ್ ಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ದಿಗಂಬರ ಕಾಮತ್, ಈಗಾಗಲೇ ಕೊಂಕಣ ರೈಲ್ವೆ ದೇಶಾದ್ಯಂತ ರೈಲು ಸೇವೆ ಪ್ರಾರಂಭಿಸಿದೆ. ಗೋವಾದ ಬಹುತೇಕ ಭೂಭಾಗವನ್ನು ಕೊಂಕಣ ರೈಲ್ವೆ ವಶಪಡಿಸಿಕೊಂಡಿದೆ. ಕೇವಲ 5 ರೈಲು ಓಡಿಸುವ ನೈಋತ್ಯ ರೈಲ್ವೆ ವಲಯದ 1 ಮಾರ್ಗ ಇದ್ದು, 2ನೇ ಮಾರ್ಗ ಅಗತ್ಯ ಇಲ್ಲ. ಈಗಿರುವ ರೈಲ್ವೆ ಮಾರ್ಗದ ಅಕ್ಕಪಕ್ಕ ಜನರ ಮನೆಗಳಿವೆ. ಮತ್ತೆ 2ನೇ ಮಾರ್ಗ ಅಳವಡಿಸುವ ಕಾಮಗಾರಿ ಪ್ರಾರಂಭಗೊಂಡರೆ ಜನರ ವಸತಿ ಮೇಲೆ ಪರಿಣಾಮ ಬೀರುತ್ತದೆ. ಪರಿಸರ ಮತ್ತಷ್ಟು ಹದಗೆಡುತ್ತದೆ ಎಂದು ದೂರಿದರು.

    ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ ಚೋಡಾನಕರ, ಪ್ರಮುಖರಾದ ಅಮರನಾಥ ಪಣಜಕರ, ಸಂಕಲ್ಪ ಅಮೋಣಕರ, ಸಚಿನ ತರವಿ, ಜನಾರ್ದನ ಭಂಡಾರಿ ಇತರರಿದ್ದರು. ಬೇಡಿಕೆ ಈಡೇರಿಕೆಗಾಗಿ ವಲಯದ ಎಜಿಎಂ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts