More

    ದ್ರವ ಆಹಾರ ಸೇವನೆ ಬಹುಮುಖ್ಯ

    ಚಿತ್ರದುರ್ಗ: ಹೆಚ್ಚುತ್ತಿರುವ ತಾಪಮಾನದ ಈ ಸಂದರ್ಭದಲ್ಲಿ ದ್ರವ ಆಹಾರ ಸೇವನೆ ಬಹು ಮುಖ್ಯವೆಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
    ತಾಲೂಕಿನ ಜೆ.ಎನ್.ಕೋಟೆ ಫೌಲ್ಟ್ರಿ ಫಾರಂವೊಂದರ ಅನ್ಯ ರಾಜ್ಯಗಳ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಕುರಿತ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ನಿತ್ಯ ಸ್ನಾನ, ಕೈಗಳ ಸ್ವಚ್ಛತೆ, ತೆಳು ಮತ್ತು ಶುಭ್ರ ಕಾಟನ್ ಬಟ್ಟೆಗಳನ್ನು ಧರಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು. ರಾಗಿ ಗಂಜಿ, ಮಜ್ಜಿಗೆ, ಬೇಳೆ ನೀರು ಇತ್ಯಾದಿ ಸುಲಭವಾಗಿ ಜೀರ್ಣವಾಗುವಂತಹ ದ್ರವ ಆಹಾರವನ್ನು ಸೇವಿಸಬೇಕು ಎಂದರು.
    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಎಚ್.ಆಂಜನೇಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಮಾತನಾಡಿದರು.
    ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರತ್ನಮ್ಮ ಬೀರಜ್ಜರ್, ಸಮುದಾಯ ಆರೋಗ್ಯ ಅಧಿಕಾರಿ ರಮೇಶ್, ಫೌಲ್ಟ್ರಿ ಫಾರಂ ವ್ಯವಸ್ಥಾಪಕ ಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts