More

    ದೊಡವಾಡ ಕೆವಿಜಿ ಬ್ಯಾಂಕ್‌ಗೆ ಬೀಗ ಹಾಕಿ ಪ್ರತಿಭಟನೆ

    ಬೈಲಹೊಂಗಲ: ತಾಲೂಕಿನ ದೊಡವಾಡ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗ್ರಾಹಕರಿಗೆ ಸರಿಯಾದ ಸೇವಾ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು, ಸೋಮವಾರ ಬ್ಯಾಂಕ್ ಸಹಾಯಕ ಶಾಖಾಧಿಕಾರಿ ಹಾಗೂ ಸಿಬ್ಬಂದಿಯನ್ನು ಹೊರಗೆ ಹಾಕಿ ಬ್ಯಾಂಕ್‌ಗೆ ಬೀಗ ಹಾಕಿ ಪ್ರತಿಭಟಿಸಿದರು.

    ಗ್ರಾಮಸ್ಥರಾದ ಮಡಿವಾಳಪ್ಪ ಹತ್ತಿಕಟಗಿ, ನಿಂಗಪ್ಪ ಚೌಡನ್ನವರ, ರವಿ ಅಕ್ಕಿ, ಪುಂಡಲೀಕಪ್ಪ ಹೆಬ್ಬಳ್ಳಿ ಮಾತನಾಡಿ, ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಅಸಹಕಾರ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದರು. ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಬ್ಯಾಂಕ್ ಖಾತೆ ಅತಿ ಅವಶ್ಯವಿದ್ದು, ಖಾತೆ ತೆರೆದು ಹೊಸ ಪಾಸ್‌ಬುಕ್ ವಿತರಿಸಲು ತಿಂಗಳಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಜನರ ಜತೆ ಅಸಹಕಾರದಿಂದ ವರ್ತಿಸಿ, ಸರಿಯಾಗಿ ಕೆಲಸ ಮಾಡಿಕೊಡುತ್ತಿಲ್ಲ. ಗ್ರಾಮಕ್ಕೆ ಕೆವಿಜಿ ಬ್ಯಾಂಕ್ ಶಾಖೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆಯಿತು.

    ದೊಡವಾಡ ಠಾಣೆಯ ಹವಾಲ್ದಾರ್ ಆರ್.ಸಿ.ತೋಟಗೇರ ಗ್ರಾಮಸ್ಥರ ಮನವೊಲಿಸಿ ಬ್ಯಾಂಕ್ ಪ್ರಧಾನ ಶಾಖೆಯ ಮೇಲಧಿಕಾರಿಗಳ ಜತೆ ಮೊಬೈಲ್ ಮೂಲಕ ಮಾತನಾಡಿದರು. ಇನ್ನಷ್ಟು ಸಿಬ್ಬಂದಿ ಒದಗಿಸಿ ಜನದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಬ್ಯಾಂಕ್ ಕೆಲಸಕ್ಕೆ ಅನುವು ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts