More

    ದೈಹಿಕ ಸಾಮಥ್ರ್ಯ ಹೆಚ್ಚಳಕ್ಕೆ ಕ್ರೀಡೆ ಸಹಕಾರಿ


    ಯಾದಗಿರಿ: ಆರೋಗ್ಯಕರವಾಗಿರುವುದು ಸಂತೋಷದ ಜೀವನಕ್ಕೆ ಬಹಳ ಮುಖ್ಯವಾಗಿದ್ದು, ನಿತ್ಯ ವ್ಯಾಯಾಮ, ಯೋಗದ ಮೂಲಕ ಸದೃಢರಾಗಿರಬೇಕು ಎಂದು ನಗರಠಾಣೆ ಪಿಎಸ್ಐ ಪರಶುರಾಮ ತಿಳಿಸಿದರು.

    ನಗರದ ಖಂಡೇಲವಾಲ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶನಿವಾರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ ಮತ್ತು ಅವರ ವ್ಯಕ್ತಿತ್ವವನ್ನು ನಿಮರ್ಿಸಲು ಸಹಾಯ ಮಾಡುತ್ತದೆ. ಗೆಲ್ಲುವುದು ಮತ್ತು ಸೋಲುವುದು ಆಟದ ಭಾಗವಾಗಿದೆ, ಆದರೆ ಸ್ಪರ್ಧಾತ್ಮಕ ಮನೋಭಾವ ಮತ್ತು ಶಕ್ತಿಯನ್ನು ತೋರಿಸುವುದು ಹೆಚ್ಚು ಮುಖ್ಯ ಎಂದರು.

    ಪತ್ರಕರ್ತ ಮಹೇಶ ಕಲಾಲ ಮಾತನಾಡಿ, ಇಂದಿನ ಪೀಳಿಗೆಯ ಮಕ್ಕಳು ಅತಿಹೆಚ್ಚು ಸೂಕ್ಷ್ಮತೆ ಉಳ್ಳವರಾಗಿದ್ದಾರೆ. ಕೇವಲ ಪಾಠದ ಕಡೆಗಮನ ಹರಿಸಲು ಪೋಷಕರು ಅವರ ಮೇಲೆ ಭಾರವನ್ನು ಹೇರುತ್ತಿದ್ದಾರೆ. ಪಾಠದ ಜತೆ ಕ್ರೀಡಾತ್ಮಕ ಭಾವನೆ, ಕಲಾ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಅವರಿಗೆ ಪ್ರೊತ್ಸಹಿಸಬೇಕು, ಮಕ್ಕಳ ಭಾವನೆಯನ್ನು ಅರ್ಥಮಾಡಿಕೊಂಡು ಅವರ ಕನಸಿನ ನಿಲುವಿಗೆ ದಾರಿ ಮಾಡಿಕೊಡಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts