More

    ದೇಶದ ಸುರಕ್ಷತೆಗೆ ಗಟ್ಟಿ ನಿರ್ಧಾರ

    ಬೀದರ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆ ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಸುರಕ್ಷತೆಗೆ ಗಟ್ಟಿ ನಿರ್ಧಾರ ಕೈಗೊಂಡಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಲಬುರಗಿ ವಿಭಾಗ ಸಂಯೋಜಕ ಶಿವಶರಣಪ್ಪ ಪಾಟೀಲ ಹೇಳಿದ್ದಾರೆ.
    ಮುಸ್ಲಿಂ ಲೀಗ್ ಎಸಗಿದ ಹೇಯ ಕೃತ್ಯಗಳ ಪುನರಾವರ್ತನೆಗೆ ಪಿಎಫ್‍ಐ ಷಡ್ಯಂತ್ರ ರೂಪಿಸಿತ್ತು. ದೇಶ ವಿಭಜನೆಯ ವಿಷ ಬೀಜ ಬಿತ್ತಲು ಪ್ರಯತ್ನಿಸಿತ್ತು. ಐಎಸ್‍ಐಎಸ್, ಅಲಕೈದಾ, ಲಷ್ಕರ್-ಏ- ತೊಯ್ಬಾದಂತಹ ಸಂಘಟನೆಗಳ ಸಂಪರ್ಕದೊಂದಿಗೆ ಭಾರತದ ನೆಲದಲ್ಲಿ ಇಸ್ಲಾಮಿಕ್ ಯುದ್ಧ ಸಾರುವ ಸಿದ್ಧತೆಯಲ್ಲಿತ್ತು. ಅದನ್ನು ಆರಂಭದಲ್ಲೇ ಹೊಸಕಿ ಹಾಕಿದ ಕೇಂದ್ರದ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ದೇಶ ಭಕ್ತರ ಸಂತಸಕ್ಕೂ ಕಾರಣವಾಗಿದೆ ಎಂದು ಹೇಳಿದ್ದಾರೆ.
    ಕೇಂದ್ರ ಸರ್ಕಾರ ಬಲವಾದ ಕಾನೂನು ಕ್ರಮದ ಮೂಲಕವೇ ಪಿಎಫ್‍ಐ ಅನ್ನು ಹತ್ತಿಕ್ಕಿದೆ. ಈ ಮೂಲಕ ಇದು 1947 ಅಲ್ಲ, 2022ನೇ ವರ್ಷ ಎನ್ನುವ ಸಂದೇಶ ನೀಡಿದೆ. ಕೇಂದ್ರದ ತೀರ್ಮಾನವನ್ನು ದೇಶದ ಜನ ಪಕ್ಷಾತೀತವಾಗಿ ಸ್ವಾಗತಿಸಬೇಕು  ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts