More

    ದೇಶದ ಪರಾಕ್ರಮ ಮೆರೆಯುವವರು

    ಅಥಣಿ ಗ್ರಾಮೀಣ: ಕಾರ್ಗಿಲ್ ಯುದ್ಧದಲ್ಲಿ ದೇಶದ ಸೈನಿಕರು ಪರಾಕ್ರಮ ಮೆರೆದು ದೇಶವನ್ನು ರಕ್ಷಿಸಿದ್ದಾರೆ ಎಂದು ಅಥಣಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಿವಮಲ್ಲಪ್ಪ ಕುಳಲಿ ಹೇಳಿದರು.

    ಅಥಣಿ ತಾಲೂಕಿನ ದಬದಬಹಟ್ಟಿ, ದರೂರ, ಯಲಿಹಡಲಗಿ, ಕೊಕಟನೂರ, ಅಡಹಳ್ಳಿ, ಅಡಹಳ್ಳಟ್ಟಿ ಸೇರಿ ಹಲವು ಗ್ರಾಮಗಳಲ್ಲಿ ಬುಧವಾರ ಅಥಣಿ ತಾಲೂಕಿನ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾರ್ಗಿಲ್ ಕದನದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

    ಮಾಜಿ ಸೈನಿಕ ಅನಿಲ ಖೋತ ಮಾತನಾಡಿದರು. ಮಾಜಿ ಯೋಧರಾದ ಮಹಾದೇವ ಭೋಸಲೆ, ಸಿದರಾಯ ಸನದಿ, ವೆಂಕಟೇಶ ಕುಲಕರ್ಣಿ, ಚಂದ್ರಕಾಂತ ಪವಾರ, ರಾಮನಗೌಡ ಪಾಟೀಲ, ಪರಸಪ್ಪ ಕರೋಲಿ, ಆನಂದ ನಾವಿ, ಬಿ.ಬಿ. ಕರಾಳೆ, ರಾಮಚಂದ್ರ ಲಾಂಡಗೆ, ಮಲ್ಲಪ್ಪ ಗಲಗಲಿ, ಶಿವು ರಾವೂರ, ಚನ್ನಪ್ಪ ಶೇಗಾಂವ, ಪಿಡಿಒ ಬಿ.ಎಚ್ ಬಳೋಜಿ ಇತರರಿದ್ದರು.

    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶಾಂತಾಬಾಯಿ ದೇಶಪಾಂಡೆ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಮಾಜಿ ಸೈನಿಕ ಮಹಾದೇವ ಭೋಸಲೆ, ಪ್ರಾಚಾರ್ಯ ಅಶೋಕ ತುಪ್ಪದ, ರಾವಸಾಬ್ ಜಗತಾಪ, ಸದಾಶಿವ ಹಂಡಗಿ, ಸಂಜು ಗೌರಗೊಂಡ, ವಿಶ್ವಾಸ ಪಾಟೀಲ, ಶಿವಾನಂದ ಹಿರೇಮಠ, ಪಾರಿಸ ಅಕ್ಕೋಳ, ಮುರಗೆಪ್ಪ ಹಲ್ಯಾಳ, ದತ್ತಾ ಭೋಸಲೆ, ನಯನಾ ನಾಯಕ, ಭಾರತಿ ದಿನ್ನಿ ಇತರರಿದ್ದರು.

    ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ನಿವೃತ್ತ ಸೈನಿಕರು ಹಾಗೂ ಗ್ರಾಮದ ಮುಖಂಡರು ಬುಧವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಮಾಜಿ ಸೈನಿಕರಾದ ಶ್ರೀಮಂತ ಪಡಸಲಗಿ, ರಾವಸಾಬ ಜಿಬಾಗೋಳ, ರವೀಂದ್ರ ಕುಳ್ಳೋಳ್ಳಿ, ರಾವಸಾಬ ಚವ್ಹಾಣ, ದಾವಲ್ ಕೊರಬು. ಮುಖಂಡರಾದ ಸುರೇಶ ಈಚೇರಿ, ಬಸಪ್ಪ ಗುಮಟಿ, ರಾವಸಾಬ ಪಾಟೀಲ, ಗೋಪು ಸಪ್ತಸಾಗರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts