More

    ದೇಶದಲ್ಲಿ ಪರಿವರ್ತನೆಗೆ ಕುರುಬರು ನಾಂದಿ – ಎಚ್.ಎಂ. ರೇವಣ್ಣ – ಶೆಫರ್ಡ್ ಇಂಡಿಯಾ ಸಮಾವೇಶದ ಪೂರ್ವಭಾವಿ ಸಭೆ

    ದಾವಣಗೆರೆ: ಅಕ್ಟೋಬರ್ 3 ರಂದು ಬೆಳಗಾವಿಯಲ್ಲಿ ಜಿಲ್ಲಾ ಹಮ್ಮಿಕೊಂಡಿರುವ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ಪ್ರತಿನಿಧಿಗಳ ಮಹಾಸಮಾವೇಶ ದೇಶದಲ್ಲಿ ಹೊಸ ಪರಿವರ್ತನೆ ತರಲಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

    ನಗರದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
    ಬೆಳಗಾವಿ ಮಹಾ ಸಮಾವೇಶದಲ್ಲಿ ಹರಿಯಾಣ ರಾಜ್ಯಪಾಲರು ಸೇರಿ ದೇಶದ ಎಲ್ಲ ರಾಜ್ಯಗಳ ಸಮಾಜದ ಶಾಸಕರು, ಸಚಿವರು, ಸಂಸದರು ಹಾಗೂ ಜನಪ್ರತಿನಿಧಿಗಳು ಮತ್ತು ಮಠಾಧೀಶರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಸನ್ಮಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.
    ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವುದು, ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು, ಕುರಿಗಾಹಿಗಳಿಗೆ ಶಿಕ್ಷಣ ಮೊದಲಾದ ಸೌಲಭ್ಯ ಕಲ್ಪಿಸುವುದು ಸೇರಿ 11 ಬೇಡಿಕೆಗಳನ್ನು ಸಮಾವೇಶದಲ್ಲಿ ಮಂಡಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
    ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕುರುಬ ಸಮಾಜವು ಬಹಳಷ್ಟು ಮುಂದಿದೆ ಎಂಬ ಹಿರಿಮೆ ಇದೆ. ದೇಶದಲ್ಲಿ ಸಮಾಜ ಸಂಘಟಿಸುವ ಉದ್ದೇಶದಿಂದ ಎಚ್. ವಿಶ್ವನಾಥ್ ಅವರ ಚಿಂತನೆಯಂತೆ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆ ಸ್ಥಾಪಿಸಲಾಗಿದ್ದು, ಎಲ್ಲ ರಾಜ್ಯಗಳಲ್ಲೂ ಸಂಘಟನೆಗೆ ಅತ್ಯುತ್ತಮ ಸಹಕಾರ ನೀಡಲಾಗಿದೆ ಎಂದರು.
    ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆ ಸ್ಥಾಪನೆ ಫಲವಾಗಿ ತೆಲಂಗಾಣ, ಗುಜರಾತ್, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಕುರುಬ ಸಮಾಜದ ಹಲವು ಬೇಡಿಕೆಗಳು ಈಡೇರುವಂತಾಗಿದೆ. ತೆಲಂಗಾಣ ಮಾದರಿಯಲ್ಲಿ 20 ಕುರಿ ಹಾಗೂ ಒಂದು ಟಗರು ನೀಡುವ ಯೋಜನೆ ರಾಜ್ಯಕ್ಕೂ ಮಂಜೂರಾಗಿದ್ದು ಇದಕ್ಕಾಗಿ ಕೇಂದ್ರದಿಂದ 340 ಕೋಟಿ ರೂ. ಹಣ ತರಲಾಗಿದೆ ಎಂದು ತಿಳಿಸಿದರು.
    ಈಗ ಕುರುಬರ ನಡೆ ಬೆಳಗಾವಿಯ ಕಡೆ ಹೊರಟಿದ್ದು ಮುಂದಿನ ದಿನಗಳಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕುರುಬ ಸಮಾಜದ ಬೃಹತ್ ಸಮಾವೇಶ ನಡೆಸುವ ಚಿಂತನೆಯಿದೆ ಎಂದರು.
    ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆ ರಾಜ್ಯಾಧ್ಯಕ್ಷ ಸಿ.ಎಂ.ನಾಗರಾಜ್ ಮಾತನಾಡಿ, ದೇಶದಲ್ಲಿ 12 ಕೋಟಿ ಜನ ಕುರುಬ ಸಮಾಜದ ಜನಸಂಖ್ಯೆಯಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ 5 ಲಕ್ಷಕ್ಕೂ ಅಧಿಕ ಸಮಾಜ ಬಾಂಧವರು ಬೆಳಗಾವಿ ಮಹಾ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲಿದ್ದಾರೆ. ದೇಶದ ಪ್ರಧಾನಮಂತ್ರಿ ಇತ್ತ ತಿರುಗಿ ನೋಡುವಂತಾಗಿದೆ ಎಂದು ಹೇಳಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ ರಾಜ್ಯ ಸರ್ಕಾರ ಎಚ್.ಎಂ.ರೇವಣ್ಣ ಅವರಿಗೆ ಸೂಕ್ತ ಅಧಿಕಾರ ನೀಡಬೇಕು. ಇದರಿಂದ ಸಮಾಜಕ್ಕೆ ಶಕ್ತಿ ಬರಲಿದೆ ಎಂದರೆ, ಇನ್ಸೈಟ್ ಸಂಸ್ಥೆಯ ವಿನಯಕುಮಾರ್ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕುರುಬ ಸಮಾಜಕ್ಕೆ ಟಿಕೆಟ್ ಪಡೆಯಬೇಕು ಎಂದು ಹೇಳಿದರು.
    ಮಾಜಿ ಶಾಸಕ ಎಸ್.ರಾಮಪ್ಪ, ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್, ವಿಪಕ್ಷ ನಾಯಕ ಪ್ರಸನ್ನಕುಮಾರ್, ಸಂಸ್ಥೆ ಉಪಾಧ್ಯಕ್ಷ

    ಬಾಬು ಜಿದ್ದಿಮನಿ, ಎಂ.ಎಚ್. ಪ್ರೇಮಲತಾ,ಖಜಾಂಚಿ ಎಂ.ಜಯಪ್ಪ, ಕಾರ್ಯದರ್ಶಿ ಜಿ.ಎಸ್.ಕುಮಾರಗೌಡ, ಉಪಾಧ್ಯಕ್ಷೆ ರೂಪಾ, ಕುರುಬ ಸಮಾಜದ ಮುಖಂಡರಾದ ಎಲ್.ತಿಪ್ಪೇಸ್ವಾಮಿ, ಶಿವಕುಮಾರ್ ಒಡೆಯರ್, ನಾ.ಲೋಕೇಶ್ ಒಡೆಯರ್, ನಂದಿಗಾವಿ ಶ್ರೀನಿವಾಸ್, ಬೆಳಲಗೆರೆ ಶಿವಣ್ಣ, ಜಿ.ಸಿ.ನಿಂಗಪ್ಪ, ವಕೀಲ ಲೋಕಿಕೆರೆ ಸಿದ್ದಪ್ಪ, ತಿಪ್ಪೇಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts