More

    ದೇಶಕ್ಕೆ ಭಾರತೀಯ ಜನತಾ ಪಕ್ಷ ಮಾರಕ

    ಸೇಡಂ: ಜನರ ಸಮಸ್ಯೆ ಆಲಿಸಿ, ಸ್ಪಂದಿಸಬೇಕಾದ ಸರ್ಕಾರ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ, ಕೋಮುವಾದ ಸೃಷ್ಟಿಸಲು ಹೊರಟಿದೆ. ಬಿಜೆಪಿ ಸರ್ಕಾರದಿಂದಾಗಿ ರಾಜ್ಯದ ಶಾಂತಿ ಸರ್ವನಾಶವಾಗಿದ್ದು, ಎಲ್ಲೆಡೆ ಕೊಲೆ- ಸುಲಿಗೆ ಹೆಚ್ಚೆಚ್ಚು ನಡೆಯುತ್ತಿವೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ದೂರಿದರು.

    ಯಾನಾಗುಂದಿ ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕಾಂಗ್ರೆಸ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಯಾನಾಗುಂದಿಯಿಂದ-ಸುಲೇಪೇಟವರೆಗೆ ಜನಜಾಗೃತಿ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಅದಾನಿ, ಅಂಬಾನಿ ಸೇರಿ ಇನ್ನಿತರ ಬಂಡವಾಳ ಶಾಹಿಗಳಿಗೆ ಬಿಜೆಪಿ ಲಾಭ ಮಾಡಿಕೊಡುತ್ತಿದೆ. ದೇಶಕ್ಕೆ ಮಾರಕವಾದ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದೆ ಎಂದು ಕಿಡಿಕಾರಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ದೇಶಕ್ಕಾಗಿ ಕಾಂಗ್ರೆಸ್‌ನ ಸಾಕಷ್ಟು ನಾಯಕರು ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ಆದರೆ ಆರ್‌ಎಸ್‌ಎಸ್ ಹಾಗೂ ಬಿಜೆಪಿಯಿಂದ ಯಾರೊಬ್ಬರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಮುಸ್ಲಿಮರು ಭಯೋತ್ಪಾದಕರನ್ನು ಹುಟ್ಟು ಹಾಕುತ್ತಾರೆ ಎಂದು ಬೊಬ್ಬೆ ಹೊಡೆಯುವ ಹಿಂದು ಸಂಘಟಕರು, ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಏಕೆ ಪೂಜಿಸ್ತಾರೆ ? ಇದನ್ನು ಹಿಂದು ಭಯೋತ್ಪಾದನೆ ಅನ್ನಬೇಕೇ ? ಎಂದು ಪ್ರಶ್ನಿಸಿದರು.

    ಮಾಜಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಜನವಿರೋಧಿ ಬಿಜೆಪಿ ಆಡಳಿತವನ್ನು ಕೊನೆಗೊಳಿಸುವುದು ಅಗತ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ಸಮ ಸಮಾಜದ ನಿರ್ಮಾಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾಗಿದೆ ಎಂದರು.

    ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಚನ್ನಾರಡ್ಡಿ ತುನ್ನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಮುಖಂಡರಾದ ಮುಕ್ರಂಖಾನ್, ಮಹಾಂತಪ್ಪ ಸಂಗಾವಿ, ಸತೀಶರೆಡ್ಡಿ ರಂಜೋಳ ಮಾತನಾಡಿದರು.

    ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಮುಧೋಳ ಬ್ಲಾಕ್ ಅಧ್ಯಕ್ಷ ರವೀಂದ್ರ ನಂದಿಗಾಮ, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಜೈಭೀಮ ಊಡಗಿ, ಪ್ರಮುಖರಾದ ಮಲ್ಲಿಕಾರ್ಜುನ ಭಂಕೂರ, ಭೀಮಾಶಂಕರ ಕೊಳ್ಳಿ, ಶರಣಪ್ಪ ಮಾನೇಗಾರ, ಮಹಿಪಾಲರೆಡ್ಡಿ ಗುರುಮಠಕಲ್, ಶಂಭುರೆಡ್ಡಿ ಮದ್ನಿ, ರಾಜಗೋಪಾಲರೆಡ್ಡಿ, ವಿಶ್ವನಾಥ ಪಾಟೀಲ್, ಸಿದ್ದರಾಮ ಪ್ಯಾಟಿ, ಪ್ರಭಾವತಿ ಪಾಟೀಲ್, ಬಸಮ್ಮ ಪಾಟೀಲ್, ಭೀಮರಾವ ಅಳ್ಳೊಳ್ಳಿ, ರವಿ ಸಾಹುಕಾರ, ರಾಜುಗೌಡ ಬೆನಕನಹಳ್ಳಿ, ಜಗನ್ನಾಥ ಚಿಂತಪಳ್ಳಿ, ಅಬ್ದುಲ್ ಗಫೂರ್ ಇತರರಿದ್ದರು.
    ಶ್ರೀನಿವಾಸರೆಡ್ಡಿ ಶಕಲಾಸಪಲ್ಲಿ ಸ್ವಾಗತಿಸಿದರು. ಸಿದ್ದು ಬಾನರ್ ನಿರೂಪಣೆ ಮಾಡಿದರು. ವೆಂಕಟರೆಡ್ಡಿ ಯಾನಾಗುಂದಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts