More

    ದೇಶಕ್ಕೆ ಅಕ್ಷರದವ್ವನ ಕೊಡುಗೆ ಅಪಾರ

    ಚಿತ್ರದುರ್ಗ: ದೇಶದೊಳಗೆ ಮೌಢ್ಯದ ವಿರುದ್ಧ ಹೋರಾಟದ ಜೊತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರ ಎಂದು ಉಪನ್ಯಾಸಕ ಹರಿಯಬ್ಬೆ ಟಿ.ತಿಪ್ಪೇಶ್ ಹೇಳಿದರು.

    ಜಂಬೂ ದ್ವೀಪ ಕರ್ನಾಟಕ ಮಹಾತ್ಮಪುಲೆ ಅಧ್ಯಯನ ಕೇಂದ್ರದಲ್ಲಿ ಬುಧವಾರ ನಡೆದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

    ವಿದ್ಯೆ ಯಾರೊಬ್ಬರ ಸ್ವತ್ತಲ್ಲವೆಂದು ಸ್ತ್ರೀಯರನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂಬ ಛಲ ಹೊಂದಿದ್ದ ಅವರು, ಅನೇಕ ಅವಮಾನ ಸಹಿಸಿಕೊಂಡರು. ಇದಕ್ಕಾಗಿ ಅಕ್ಷರ ಕ್ರಾಂತಿ ಸೃಷ್ಟಿಸಿ, ಶ್ರಮಿಸಿದರು. ಪ್ರಶ್ನಿಸದೆ, ಯಾವುದನ್ನು ಒಪ್ಪಿಕೊಳ್ಳುವ ಗುಣ ಅವರದ್ದಾಗಿರಲಿಲ್ಲ ಎಂದು ಸ್ಮರಿಸಿದರು.

    ಫುಲೆ ಪ್ಲೇಗ್ ರೋಗಿಗಳ ಆರೈಕೆ ಮಾಡುತ್ತಲೆ ನಿಧನರಾದರು. ಅವರು ಯಾವುದೇ ಒಂದು ರಾಜ್ಯಕ್ಕೆ ಸೀಮಿತವಲ್ಲ. ಜ್ಞಾನದಾನ ಶ್ರೇಷ್ಠವೆಂದು ಸಾರಿ ಜಾಗೃತಿ ಮೂಡಿಸಿದ ಭಾರತದ ಮಹಾನ್ ಚೇತನ ಎಂದು ಬಣ್ಣಿಸಿದರು.

    ನಿವೃತ್ತ ಅಧಿಕಾರಿ ಡಿ.ಟಿ.ಜಗನ್ನಾಥ್ ಮಾತನಾಡಿ, ಎಲ್ಲರೂ ವಿದ್ಯಾವಂತರಾಗಿ ದೇಶಕ್ಕೆ ಕೊಡುಗೆ ನೀಡುವ ಮೂಲಕ ಅಕ್ಷರದವ್ವನ ಕನಸು ನನಸಾಗಿಸೋಣ. ಅವರ ಶ್ರಮ ಸಾರ್ಥಕಗೊಳಿಸಲು ಪಣ ತೊಡೋಣ ಎಂದು ಸಲಹೆ ನೀಡಿದರು.

    ಜಂಬೂ ದ್ವೀಪ ಕರ್ನಾಟಕ ಅಧ್ಯಕ್ಷ ರಾಮಣ್ಣ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಆಶಯ ಈಡೇರಲು ನಮ್ಮ ಬೇರು ನಾವುಗಳೇ ಗಟ್ಟಿಗೊಳಿಸಿಕೊಳ್ಳಬೇಕು. ಅದೇ ರೀತಿ ಫುಲೆ ಅವರ ತತ್ವಾದರ್ಶದೊಂದಿಗೆ ಪ್ರತಿ ಹೆಣ್ಣು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.

    ಇದೇ ವೇಳೆ ಉಪನ್ಯಾಸಕಿ ಡಾ.ಮಮತಾ, ಮುಖ್ಯ ಶಿಕ್ಷಕ ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯೆ ಸಿದ್ದಲಿಂಗಮ್ಮ, ಕೃಷಿ ಅಧಿಕಾರಿ ಡಾ.ಟಿ.ಪಾರ್ವತಮ್ಮ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ಬಿ.ಟಿ.ಲೋಲಾಕ್ಷಮ್ಮ, ಡಾ.ಮೋಹನ್, ರಾಘವೇಂದ್ರ, ಡಾ.ಬಿ.ಎಂ.ಗುರುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts