More

    ದೇವಿಯನ್ನು ಆರಾಧಿಸಿ ದುಶ್ಚಟ ತ್ಯಜಿಸಿ

    ಕಕ್ಕೇರಾ : ನವರಾತ್ರಿಯಲ್ಲಿ ದೇವಿಯನ್ನು ಆರಾಧಿಸುವ ಮೂಲಕ ನಮ್ಮಲ್ಲಿರುವ ದುಶ್ಚಟಗಳನ್ನು ತ್ಯಜಿಸಬೇಕು ಎಂದು ಬೀದರ್, ಕಲಬುರಗಿ ಮತ್ತು ಯಾದಗಿರಿ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ನಿರ್ದೇಶಕ ಹನುಮಂತರಾಯಗೌಡ ಜಹಾಗೀರದಾರ್ ಹೇಳಿದರು.

    ಪಟ್ಟಣದ ಸದರಗಟ್ಟಿಯಲ್ಲಿ ಶಾರದೀಯ ನವರಾತ್ರಿ ನಿಮಿತ್ತ ಭಾನುವಾರ ಆರಂಭವಾದ ಪುರಾಣ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ದೇವಿ ವಿವಿಧ ಅವತಾರಿಣಿಯಾಗಿ ಮಹಿಷಾಸುರನ ಚೆಂಡಾಡಿದ ಹಾಗೆ ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮತ್ಸರದಂಥ ರಾಕ್ಷಸರನ್ನು ಹೊಡೆದೊಡಿಸಿದಾಗ ಮಾತ್ರ ದೇವಿ ನಮ್ಮನ್ನು ಸದಾ ಅನುಗ್ರಹಿಸುತ್ತಾಳೆ ಎಂದು ಹೇಳಿದರು.

    ಪುರಾಣ ಪ್ರವಚನಕಾರ ಶ್ರೀ ಬಸಯ್ಯ ಶಾಸ್ತಿç, ಅಯ್ಯಣ್ಣಪ್ಪ ಪೂಜಾರಿ, ದೇವಿ ಅರ್ಚಕ ಅಪ್ಪಣ್ಣ ಬಡಿಗೇರ, ಪ್ರಮುಖರಾದ ಗುಂಡಪ್ಪ ಸೋಲಾಪುರ, ದೇವಿಂದ್ರಪ್ಪ ಬಳಿಚಕ್ರ, ರಾಜು ಹವಾಲ್ದಾರ್, ರಮೇಶಶೆಟ್ಟಿ, ನಿಂಗಯ್ಯ ಬೂದಗುಂಪಿ, ಸಿದ್ದಣ್ಣ ದೇಸಾಯಿ, ಪರಮಣ್ಣ ಕಮತಗಿ, ಪರಶುರಾಮ ಗೋವಿಂದರ, ಚಿದಾನಂದ ಕಮತಗಿ, ಕೆ.ಗವಿಸಿz್ದೆÃಶ, ಜೆಟ್ಟೆಪ್ಪ ದಳಾ, ಚಂದ್ರು ವಜ್ಜಲ್, ನಿಂಗಣ್ಣ ಗುರಿಕಾರ, ಶಿವಪ್ಪ ಜಾಲಹಳ್ಳಿ, ಈರಯ್ಯಸ್ವಾಮಿ, ಹಣಮಂತ್ರಾಯ ಗುರಿಕಾರ, ಈರಣ್ಣ ಪತ್ತಾರ, ಬುಚ್ಚಪ್ಪ ಗುರಿಕಾರ ಇತರರಿದ್ದರು.

    ಸೋಮಶೇಖರ ದೊರೆ ಸ್ವಾಗತಿಸಿದರು. ರಾಜು ಹವಾಲ್ದಾರ್ ಪ್ರಾಸ್ತಾವಿಕ ಮಾತನಾಡಿದರು. ಮಾನಪ್ಪ ಸತ್ಯ ವಂದಿಸಿದರು. ಬಸಯ್ಯಸ್ವಾಮಿ ನಿರೂಪಣೆ ಮಾಡಿದರು. ವಿನೋದಕುಮಾರ ಗವಾಯಿಗಳ ಸಂಗೀತ ಸೇವೆಗೆ ಗದುಗಿನ ಮಲ್ಲಿಕಾರ್ಜುನ ಕರೆಕನಹಳ್ಳಿ ತಬಲಾ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts