More

    ದೇವಾಲಯಗಳಿಗೆ ನಿರ್ವಹಣಾಧಿಕಾರಿ ನೇಮಕ ಕೈಬಿಡಿ

    ಶಿರಸಿ: ದೇವಾಲಯಗಳಿಗೆ ನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪನಾ ಸಮಿತಿ ರಚಿಸುವುದನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲಾ ಹಿಂದು ಧಾರ್ವಿುಕ ದೇವಾಲಯಗಳ ಮಹಾಮಂಡಳದ ಪ್ರತಿನಿಧಿಗಳು ಬುಧವಾರ ಆಯೋಜಿಸಿದ್ದ ವಿಡಿಯೋ ಕಾನ್ಪರೆನ್ಸ್​ನಲ್ಲಿ ಮಾತನಾಡಿದ ಶ್ರೀಗಳು, ಕೆಲವು ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ಆಡಳಿತ ವಹಿಸಿಕೊಳ್ಳುವ ಕುರಿತು ಹಾಗೂ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತು ನೋಟಿಸ್ ಜಾರಿಯಾಗಿದೆ. ಇಂಥ ನೋಟಿಸ್ ರಾಜ್ಯಾದ್ಯಂತ ಜಾರಿಯಾಗದೇ ಕೆಲವೇ ಕೆಲವು ದೇವಾಲಯಗಳಿಗೆ ತಲುಪುತ್ತಿರುವುದರಿಂದ ಸಂಘಟಿತ ಪ್ರತಿಭಟನೆ ಕಾಣುತ್ತಿಲ್ಲ. ಈ ಬಗ್ಗೆ ಎಲ್ಲ ದೇವಾಲಯಗಳ ಪ್ರಮುಖರು ಹೋರಾಡಬೇಕು ಎಂದರು.

    ಸರ್ಕಾರದಿಂದ ದೇವಾಲ ಯಗಳ ನಿರ್ವಹಣೆಯ ಕುರಿತು ಆಡಳಿತಾಧಿಕಾರಿಯನ್ನು ನೇಮಿಸುವ, ದೇವಾಲಯಗಳಿಗೆ ಸರ್ಕಾರದಿಂದಲೇ ವ್ಯವಸ್ಥಾ ಪನಾ ಸಮಿತಿ ರಚಿಸುವ ಪ್ರಕ್ರಿಯೆಯನ್ನು ಕೂಡಲೆ ತಡೆಹಿಡಿಯಬೇಕು. ಕರ್ನಾಟಕ ಹಿಂದು ಧಾರ್ವಿುಕ ಸಂಸ್ಥೆಗಳು ಮತ್ತು ಧರ್ವದಾಯ ದತ್ತಿಗಳ ಅಧಿನಿಯಮ 1997, ಈ ಕಾನೂನನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದರೆ, ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ದೇವಾಲಯಗಳ ನಿರ್ವಹಣೆಗೆ ಅಧಿಕಾರಿಗಳ ನೇಮಕ ಮಾಡುವುದು ಹಾಗೂ ಇಲಾಖೆಯಿಂದ ವ್ಯವಸ್ಥಾಪನಾ ಸಮಿತಿ ರಚಿಸುವ ಪ್ರಕ್ರಿಯೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ದೇವಾಲಯಗಳ ನಿರ್ವಹಣೆಗೆ ಯಾವುದೇ ಕಾನೂನು ಬೇಡವೆ ನ್ನುವುದು ಇದರ ಆಶಯವಲ್ಲ. ಆದರೆ, ಸರ್ಕಾರೀಕರಣ ಸರಿಯಲ್ಲ. ಭಕ್ತರ ಕೈಯಲ್ಲಿ ದೇವಾಲಯದ ಆಡಳಿತ ಇರುವಂತಾಗಬೇಕು. ಅಂತಹ ಸರ್ವಸಮ್ಮತ ಕಾನೂನನ್ನು ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

    ಎಲ್ಲ ದೇವಾಲಯಗಳಿಗೂ ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಅರಿವು ಮೂಡಿಸಬೇಕು. ಈಗಾಗಲೇ ಪ್ರಕರಣವು ಸುಪ್ರೀಂ ಕೋರ್ಟ್​ನಲ್ಲಿ ಇರುವುದರಿಂದ ತೀರ್ಪು ಬರುವ ಮೊದಲೇ ದೇವಾಲಯಗಳ ಸರ್ಕಾರೀಕರಣಕ್ಕೆ ಮುಂದಾಗಿರುವ ಕುರಿತು ಸರ್ಕಾರದ ಕ್ರಮದ ವಿರುದ್ಧ

    ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ವಕೀಲರ ಸಲಹೆ ಪಡೆದು ಕ್ರಮ ಜರುಗಿಸಬೇಕು. ಸರ್ಕಾರದಿಂದ ಹಿಂದು ದೇವಾಲಯಗಳ ಹಾಗೂ ಧಾರ್ವಿುಕ ಸಂಸ್ಥೆಗಳ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ಬಗ್ಗೆ ಸರ್ಕಾರಿ ಮಟ್ಟದಲ್ಲಿ ರ್ಚಚಿಸಿ ಹಿಂದು ದೇವಾಲಯಗಳು ಹಾಗೂ ಧಾರ್ವಿುಕ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯ್ಕೆ ಧಕ್ಕೆ ಬರದ ರೀತಿಯಲ್ಲಿ ಅಗತ್ಯ ಕ್ರಮ ವಹಿಸಬೇಕು. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು ಮುಜರಾಯಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ನೀಡಬೇಕು ಎಂದು ಸೂಚಿಸಿದರು.

    ಮಹಾಮಂಡಳದ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಧಾರ್ವಿುಕ ದತ್ತಿ ಕಾಯ್ದೆ ರದ್ದಾಗಿದ್ದು, ಸುಪ್ರೀಂ ಕೋರ್ಟ್​ನಲ್ಲಿ ಸರ್ಕಾರವು ಸಲ್ಲಿಸಿದ ಮೇಲ್ಮನವಿ ವಿಚಾರಣೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಇಂತಹ ಕಾನೂನು ಪ್ರಕ್ರಿಯೆ ಸಮಂಜಸವಾಗಿ ಕಾಣುತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts