More

    ದೇವರನ್ನು ಕಾಣುವ ಮನೋಧರ್ಮ ಬೆಳೆಸಿಕೊಳ್ಳಿ

    ದಾಂಡೇಲಿ: ನಗರದ ರಂಗನಾಥ ಸಭಾಂಗಣದಲ್ಲಿ ಭಾನುವಾರ ದಾಂಡೇಲಿ, ಹಳಿಯಾಳ ಮತ್ತು ಜೊಯಿಡಾ ತಾಲೂಕಿನ ಚೌಡಯ್ಯ ಸಮಾಜದಿಂದ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.

    ಹಾವೇರಿ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಚೌಡಯ್ಯನವರು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಶಿಷ್ಯವೆಂಬ ವಿಚಾರ ತಿಳಿಸಿದ್ದಾರೆ. ದೇವರು ಎಲ್ಲಿ್ಲ್ದಾನೆ ಎಂಬ ಪ್ರಶ್ನೆಗೆ ದೇವರು ನಮ್ಮಲ್ಲೆ ಇದ್ದಾನೆ. ಪ್ರತಿಯೊಬ್ಬರಲ್ಲಿ ದೇವರನ್ನು ಕಾಣುವ ಮನೋಧರ್ಮವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕೆಂಬ ಸಂದೇಶ ನೀಡಿದ್ದಾರೆ ಎಂದರು.

    ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿ ಕುರಿತು ಅರಿತು, ಎಲ್ಲರನ್ನೂ ನಮ್ಮವರೆಂದು ಪ್ರೀತಿಸಿ ನಿಸ್ವಾರ್ಥತೆ, ದೈವಭಕ್ತಿ, ಪರೋಪಕಾರದ ಸೇವಾ ಮನೋಭಾವದಿಂದ ಬಾಳಬೇಕು ಎಂಬ ಸಂದೇಶ ನೀಡಿದರು.

    ಕಾರ್ಯಕ್ರಮದಲ್ಲಿ ನರಗುಂದದ ಶಿಕ್ಷಕ ಬಸವರಾಜ ಕ್ಯಾರಕೊಪ್ಪ, ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಪ್ರೊ. ಎಸ್.ಎಂ. ಕಾಚಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಕಾಂತ ಗಾರವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಉಪಾಧ್ಯಕ್ಷ ರವಿ ಪೈ ಸ್ವಾಗತಿಸಿದರು. ವಿನಯ ದಳವಾಯಿ, ಲಕ್ಷೂ್ಮ ಬಾಕೇರ, ರವಿ ಜಮಾದಾರ ಅತಿಥಿಗಳನ್ನು ಪರಿಚಯಿಸಿದರು. ಶ್ರೀದೇವಿ ಪ್ರಶಾಂತ ಅಂಬಿಗೇರ ನಿರೂಪಿಸಿದರು. ಸುರೇಶ ಹಂಪಣ್ಣವರ ವಂದಿಸಿದರು.

    ಸಮಾರಂಭದಲ್ಲಿ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts