More

    ದೀಪದಿಂದ ಜ್ಞಾನದ ಬೆಳಕು ಹೊರಹೊಮ್ಮಲಿ

    ಅಥಣಿ ಗ್ರಾಮೀಣ, ಬೆಳಗಾವಿ: ಸನಾತನ ಧರ್ಮದಲ್ಲಿ ದೀಪಕ್ಕೆ ಪೂಜ್ಯನೀಯ ಸ್ಥಾನವಿದೆ. ದೀಪದಿಂದ ಜೀವನದ ಅಂಧಕಾರ ತೊಲಗಿ ಜ್ಞಾನ ನೀಡುವ ಬೆಳಕು ಹೊರಹೊಮ್ಮಲಿ ಎಂದು ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಸಂಚಾಲಕ ಅರವಿಂದರಾವ ದೇಶಪಾಂಡೆ ಹೇಳಿದರು.

    ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಕಳಸಾರೋಹಣ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಜಾತ್ರೆ, ಹಬ್ಬ ಹಾಗೂ ಧಾರ್ಮಿಕ ಕಾರ್ಯಗಳು ನಮ್ಮ ಸೊಗಡನ್ನು ಬಿಂಬಿಸಿ ಪರಸ್ಪರ ಬಾಂಧವ್ಯ ಬೆಸೆಯುತ್ತವೆ. ಇಂದು ಜನರಲ್ಲಿ ಭಕ್ತಿ ಆರಾಧನೆಗೆ ಕೊರತೆಯಿಲ್ಲ. ಕವಿ ಠ್ಯಾಗೋರ್ ಹೇಳಿದಂತೆ ಕತ್ತಲಾಯಿತೆಂದು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ಕಾಣುವ ಯೋಗ ಕಳೆದುಕೊಳ್ಳಬೇಕಾಗುತ್ತದೆ. ಕತ್ತಲು ಇದ್ದಾಗಲೇ ಬೆಳಕಿಗೆ ಒಂದು ಅರ್ಥ ಎಂದರು.

    ಮಾಜಿ ಶಾಸಕ ಶಾಹಜನ ಡೊಂಗರಗಾಂವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಶಿವು ಗುಡ್ಡಾಪುರ, ಬಸವರಾಜ ಬುಟಾಳಿ, ಸತ್ಯಪ್ಪ ಬಾಗೇಣ್ಣವರ ಮಾತನಾಡಿದರು. ಸುರೇಶ
    ಮಹಾರಾಜರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸದಾಶಿವ ಬುಟಾಳಿ, ನಾನಾಸಾಬ ಅವತಾಡೆ, ರಾವಸಾಬ ಬೇವನೂರ, ವಿಠ್ಠಲ ಮಹಾರಾಜರು, ಮಲ್ಲಿಕಾರ್ಜುನ ಅಂದಾನಿ, ಬೀರಪ್ಪ ಪೂಜಾರಿ, ಅಪ್ಪಣ್ಣ ಕಮತಗಿ, ಗೌರೀಶ ಲೆಂಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts