More

    ದಿಶಾ ಕಾಲೇಜಿಗೆ ೨೯೫ ಡಿಸ್ಟಿಂಕ್ಷನ್

    ಶೇ.೯೦ಕ್ಕೂ ಹೆಚ್ಚು ಅಂಕ ಪಡೆದ ೨೦೮ ವಿದ್ಯಾರ್ಥಿಗಳು |

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ನಗರದ ದಿಶಾ ಪದವಿಪೂರ್ವ ವಿಜ್ಞಾನ ಕಾಲೇಜಿನ ೨೯೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ೫೮೬ ಅಂಕ ಪಡೆದ ವಿದ್ಯಾರ್ಥಿನಿ ಸುಹಾಸಿನಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ.
    ೫೮೪ ಅಂಕ ಪಡೆದ ಸೂಗೂರೇಶ ಎಂ. ದ್ವಿತೀಯ, ಓಂಕಾರ ೫೮೩ ಅಂಕದೊAದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ಬರೆದ ೩೭೫ರಲ್ಲಿ ೨೦೮ ವಿದ್ಯಾರ್ಥಿಗಳು ಶೇ.೯೦ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ೮೨ ವಿದ್ಯಾರ್ಥಿಗಳು ಪ್ರತ್ಯೇಕ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದಿದ್ದಾರೆ. ಕನ್ನಡದಲ್ಲಿ ಮೂವರು, ರಸಾಯನ ಶಾಸ್ತçದಲ್ಲಿ ೧೭, ಗಣಿತ ಶಾಸ್ತçದಲ್ಲಿ ೫೬, ಜೀವಶಾಸ್ತçದಲ್ಲಿ ಐವರು, ಗಣಕ ಶಾಸ್ತçದಲ್ಲಿ ಒಬ್ಬ ವಿದ್ಯಾರ್ಥಿ ೧೦೦ಕ್ಕೆ ೧೦೦ ಅಂಕ ಪಡೆದು ಪ್ರತಿಭೆ ಮೆರೆದಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಶಿವಾನಂದ ಖಜೂರ್ಗಿ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಸಂತಸ ವ್ಯಕ್ತಪಡಿಸಿದ್ದಾರೆ.

    ಬಾಕ್ಸ್
    ರೈತ, ಕೂಲಿ ಕಾರ್ಮಿಕ, ಚಾಲಕರ
    ಮಕ್ಕಳೇ ಕಾಲೇಜಿನ ಟಾಪರ್‌ಗಳು
    ದಿಶಾ ಕಾಲೇಜಿನಲ್ಲಿ ಅಫಜಲಪುರ ತಾಲೂಕಿನ ಕೋಗನೂರ ಗ್ರಾಮದ ರೈತನ ಮಗಳು ಸುಹಾಸಿನಿ ೫೮೬ ಅಂಕ ಪಡೆದು ಕಾಲೇಜಿಗೆ ಟಾಪರ್ ಎನಿಸಿದರೆ, ಆಂಬುಲೆನ್ಸ್ ಚಾಲಕನ ಪುತ್ರ ೫೮೪ ಅಂಕ, ಕಾರ್ಮಿಕರ ಮಗ ಓಂಕಾರ ೫೮೩, ಕಾರ್ಮಿಕರ ಪುತ್ರಿ ರಾಜಶ್ರೀ ೫೭೫ ಅಂಕ ಪಡೆದಿದ್ದಾರೆ. ಸಾಧನೆಗೆ ಬಡತನ ಅಡ್ಡಿ ಬರಲ್ಲ ಎಂಬುದನ್ನು ಈ ಪ್ರತಿಭೆಗಳು ಸಾಬೀತುಪಡಿಸಿದ್ದಾರೆ. ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಕಾಲೇಜಿನ ಅಧ್ಯಕ್ಷ ಶಿವಾನಂದ ಖಜೂರ್ಗಿ. ಕಾಲೇಜಿನಲ್ಲಿ ಬೆಳಗ್ಗೆ ೮ರಿಂದ ಸಂಜೆ ೬ರವರೆಗೆ ಬೋಧನೆ ಆಲಿಸಿ ಮನೆಯಲ್ಲೂ ಅಧ್ಯಯನ ಮಾಡುತ್ತಿದ್ದೆ. ಕಾಲೇಜಿನಲ್ಲಿ ವಾರದ ಪರೀಕ್ಷೆ, ಮುಂಚಿತವಾಗಿ ಫಲಿತಾಂಶ ಮುಗಿಸಿದ್ದು ರಿವೀಸನ್‌ಗೆ ಅನುಕೂಲವಾಯಿತು. ಶಿಕ್ಷಕಿ ಆಗುವ ಗುರಿ ಹೊಂದಿz್ದೆÃನೆ ಎನ್ನುತ್ತಾರೆ ಟಾಪರ್ ಸುಹಾಸಿನಿ.

    ಕೋಟ್
    ದಿಶಾ ಕಾಲೇಜಿನ ದ್ವಿತಿಯು ಪಿಯು ಫಲಿತಾಂಶ ಪ್ರತಿವರ್ಷ ಏರುಗತಿಯಲ್ಲಿ ಸಾಗುತ್ತಿದ್ದು, ಪ್ರಸ್ತುತ ಸಾಧನೆಯ ಉತ್ತುಂಗ ತಲುಪಿದೆ. ಸಾಮಾನ್ಯ ವಿದ್ಯಾರ್ಥಿಗಳನ್ನು ಸಹ ಅಸಾಮಾನ್ಯರಾಗಿ ರೂಪಿಸಲಾಗುತ್ತಿದೆ. ಅನುಭವಿ ಬೋಧಕರು, ಉತ್ಕೃಷ್ಟ ಕಲಿಕಾ ಪ್ರಕ್ರಿಯೆ, ಉಪನ್ಯಾಸಕರ ಶ್ರಮದಿಂದ ಅತ್ಯುತ್ತಮ ಫಲಿತಾಂಶ ಬಂದಿದೆ.
    | ಶಿವಾನಂದ ಖಜೂರ್ಗಿ
    ಅಧ್ಯಕ್ಷ, ದಿಶಾ ಪದವಿಪೂರ್ವ ವಿಜ್ಞಾನ ಕಾಲೇಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts