More

    ದಿನಾಂಕ ಇಲ್ಲದ ದಾಖಲೆಗೆ ಸಂಭ್ರಮಿಸಿದ ಬಿಜೆಪಿ

    ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆಯ ಡಿಪಿಆರ್​ಗೆ ಒಪ್ಪಿಗೆ ನೀಡಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರದರ್ಶಿಸಿರುವ ದಾಖಲೆಗಳಿಗೆ ಯಾವುದೇ ದಿನಾಂಕವೇ ಇಲ್ಲ. ಮಹದಾಯಿ ವಿಷಯದಲ್ಲಿ ಬಿಜೆಪಿ ನಾಯಕರು ಮತ್ತೊಮ್ಮೆ ರೈತರನ್ನು ಮೋಸ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯ, ಶಾಸಕ ಎಚ್.ಕೆ. ಪಾಟೀಲ ಆರೋಪಿಸಿದರು.

    ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ಫೇಸ್​ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ 7 ಪುಟಗಳ ಪತ್ರದಲ್ಲಿ ಎಲ್ಲಿಯೂ ದಿನಾಂಕ ನಮೂದಿಸಿಲ್ಲ. ದಿನಾಂಕ ಇಲ್ಲದ ಪತ್ರವೂ ಸರ್ಕಾರಿ ಪತ್ರ ಆಗುತ್ತದೆಯೇ? ಈ ಪತ್ರದಲ್ಲಿ 2003ರಲ್ಲಿಯೇ ಇತ್ಯರ್ಥವಾದ ಹೈಡ್ರಾಲಾಜಿ (ಜಲ ವಿಜ್ಞಾನ ಸಂಗತಿಗಳ ಅಧ್ಯಯನ) ಹಾಗೂ 2018ರಲ್ಲಿ ಅಂತರ್ ರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣದ ತೀರ್ಪಿನ ಉಲ್ಲೇಖವಿದೆ ಎಂದು ವಿವರಿಸಿದರು.

    ಇದನ್ನೇ ನಂಬಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಟಿಪ್ಪಣಿ ಮಾಡಿದ್ದಾರೆ. ದಿನಾಂಕ ಇಲ್ಲದ ದಾಖಲೆ ಹಿಡಿದುಕೊಂಡು ಬಿಜೆಪಿ ನಾಯಕರು ಸಂಭ್ರಮಿಸಿದ್ದಾರೆ. ಡಿಪಿಆರ್ (ವಿಸõತ ಯೋಜನಾ ವರದಿ) ಇಲ್ಲದೇ ಕಳಸಾ ನಾಲಾ ಯೋಜನೆ ಕಾಮಗಾರಿ ಆರಂಭಿಸಲು ಸಾಧ್ಯವಿತ್ತೇ? ಇದೀಗ ಮಾಡಿಫೈ ಡಿಪಿಆರ್​ಗೆ ಒಪ್ಪಿಗೆ ಸಿಕ್ಕಿರಬಹುದು. ಅದು ಇಷ್ಟು ದೊಡ್ಡದಾಗಿ ಸಂಭ್ರಮಿಸುವ ವಿಷಯ ಆಗುವುದಿಲ್ಲ. ಒಂದು ವೇಳೆ ಮಾಡಿಫೈ ಡಿಪಿಆರ್​ಗೆ ಒಪ್ಪಿಗೆ ನೀಡಿದ್ದರೆ ಸಿಎಂ ಬೊಮ್ಮಾಯಿ ದಾಖಲೆಗಳೊಂದಿಗೆ ಬಹಿರಂಗ ಪಡಿಸಬೇಕು. ತಕ್ಷಣ ವಿರೋಧ ಪಕ್ಷಗಳ ನಾಯಕರ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts