More

    ದಿನಕ್ಕೊಂದು ತಿದ್ದುಪಡಿಯಿಂದ ಜಿಎಸ್‌ಟಿ ವ್ಯವಸ್ಥೆ ಜಟಿಲ, ಸರಳೀಕರಣಕ್ಕೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಆಗ್ರಹ

    ಚಿಕ್ಕಬಳ್ಳಾಪುರ: ಜಿಎಸ್‌ಟಿ ನೂತನ ನಿಯಮಗಳ ಜಾರಿಯಿಂದ ಮೂಡಿರುವ ಗೊಂದಲಗಳನ್ನು ಬಗೆಹರಿಸುವುದರ ಜತೆಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಒತ್ತಾಯಿಸಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಶುಕ್ರವಾರ ಪ್ರತಿಭಟನೆ ನಡೆಸಿತು.

    ನಗರದ ಎಲ್‌ಐಸಿ ಕಚೇರಿಯಿಂದ ಅಗಲಗುರ್ಕಿ ರೈಲ್ವೆ ಗೇಟ್ ಬಳಿ ಇರುವ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿತು.

    ಸಂಘದ ಅಧ್ಯಕ್ಷ ಎನ್.ಲಕ್ಷ್ಮೀನಾರಾಯಣ್ ಮಾತನಾಡಿ, ಸಮರ್ಪಕ ತೆರಿಗೆ ಪಾವತಿಯಿಂದ ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವುದರ ನಡುವೆ ತೆರಿಗೆ ಸ್ವೀಕಾರ ಅವೈಜ್ಞಾನಿಕ ಹೊಸ ವ್ಯವಸ್ಥೆಯ ಕರದಾತರಲ್ಲಿ ಗೊಂದಲ ಮೂಡಿಸಿದೆ, ನಿಯಮಗಳನ್ನು ಒಪ್ಪಿ, ಮಾಹಿತಿ ಸಲ್ಲಿಸಲು ಮುಂದಾದರೂ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೂತನ ಜಿಎಸ್‌ಟಿ ವ್ಯವಸ್ಥೆಯನ್ನು ಹಂತವಾಗಿ ಸರಳೀಕರಣಗೊಳಿಸಬೇಕಿತ್ತು, ಆದರೆ ದಿನಕ್ಕೊಂದು ತಿದ್ದುಪಡಿಯಿಂದ ಮತ್ತಷ್ಟು ಜಟಿಲವಾಗುತ್ತಿದೆ, ತೆರಿಗೆ ಪಾವತಿಯ ಆನ್‌ಲೈನ್ ಪೋರ್ಟಲ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಲವು ಬಾರಿ ಮಾಹಿತಿ ಭರ್ತಿಯು ಅರ್ಧಂಬರ್ಧ ಪ್ರಕ್ರಿಯೆಯಲ್ಲಿ ಸ್ಥಗಿತಗೊಳುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಕರದಾತರು ಮಾಸಿಕ ಎರಡು ವರದಿಯನ್ನು ಸಲ್ಲಿಸಬೇಕಾಗಿದೆ ಎಂದು ಟೀಕಿಸಿದರು.

    ಜಿಎಸ್‌ಟಿ ವ್ಯವಸ್ಥೆಯಲ್ಲಿನ ಗೊಂದಲ ನಿವಾರಣೆ, ವಿಳಂಬ ಶುಲ್ಕ ದುಬಾರಿ ದರವನ್ನು ಇಳಿಸುವಿಕೆ, ಪೋರ್ಟಲ್ ಸಮಸ್ಯೆ ಬಗೆಹರಿಸುವಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಮಂಜುಳಾಗೆ ಮನವಿ ಸಲ್ಲಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts