More

    ದಾವಣಗೆರೆಯಲ್ಲಿ ಫೆ.3ರಿಂದ ಕೃಷಿ ಮೇಳ

    ದಾವಣಗೆರೆ: ಯು.ಎಸ್.ಕಮ್ಯುನಿಕೇಷನ್ ಹಾಗೂ ಬೆಂಗಳೂರಿನ ಮೈಕ್ರೋಬಿ ಫೌಂಡೇಷನ್ ಸಹಯೋಗದಲ್ಲಿ ದ್ವಿತೀಯ ಬಾರಿಗೆ ಇಲ್ಲಿನ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 2023ರ ಫೆ.3ರಿಂದ ಮೂರು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದೆ.
    ಮೇಳದಲ್ಲಿ ನೂರು ನವೋದ್ಯಮಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ಜಿಲ್ಲೆಯ ಯುವಕರು ಇದರ ಸದುಪಯೋಗ ಪಡೆಯಬೇಕು ಎಂದು ಮೈಕ್ರೋಬಿ ಫೌಂಡೇಷನ್‌ನ ಜಿಲ್ಲಾ ಸಂಚಾಲಕ ಮಹದೇವಪ್ಪ ದಿದ್ದಿಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸುಧಾರಿತ ಸಮಗ್ರ ಸುಸ್ಥಿರ ಕೃಷಿ ಪದ್ಧತಿ, ತಾಂತ್ರಿಕ ಸಾವಯವ ಕೃಷಿ, ಮಣ್ಣಿನ ಫಲವತ್ತತೆ ಕುರಿತ ಮಾಹಿತಿ ಪ್ರಾತ್ಯಕ್ಷಿಕೆಗಳು, ಆಧುನಿಕ ಯಂತ್ರಗಳು, ಸುಧಾರಿತ ಯಂತ್ರೋಪಕರಣಗಳ ಪ್ರದರ್ಶನದ ಜತೆಯಲ್ಲೇ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳ, ರೈತರ ಸಂವಾದ, ಸಿರಿಧಾನ್ಯಗಳ ಮೌಲ್ಯವರ್ಧನೆ ನಡೆಯಲಿದೆ ಎಂದು ಹೇಳಿದರು.
    ಮೇಳದಲ್ಲಿ 250 ಮಳಿಗೆಗಳಿಗೆ ಅವಕಾಶ ನೀಡಲಾಗುತ್ತಿದೆ. ಜಿಪಂ ಸಿಇಒ ಕೂಡ ವಿವಿಧ ಇಲಾಖಾವಾರು ಮಳಿಗೆಗಳನ್ನು ಆಯೋಜನೆ ಮಾಡುವ ಭರವಸೆ ನೀಡಿದ್ದಾರೆ. ಆಸಕ್ತರು ಮಾಹಿತಿಗೆ ಮೊ.ಸಂ. 9480424603 ಅಥವಾ 9986814680 ಇಲ್ಲಿಗೆ ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಯು.ಎಸ್. ಕಮ್ಯುನಿಕೇಷನ್‌ನ ಎಸ್.ಎಂ.ಕೆ.ಉಮಾಪತಿ, ಕಲ್ಮೇಶ್ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts