More

    ಅಧ್ಯಕ್ಷ ಕುರ್ಚಿಗೆ ಕಾಂಗ್ರೆಸ್​ನಲ್ಲೇ ಪೈಪೋಟಿ!

    ದಾಂಡೇಲಿ: ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನ.1 ರಂದು ದಿನಾಂಕ ನಿಗದಿಯಾಗಿದ್ದು, ಅಧಿಕಾರಕ್ಕಾಗಿ, ತೆರೆ ಮರೆಯ ಪೈಪೋಟಿ ಪ್ರಾರಂಭವಾಗಿದೆ.

    31 ಸ್ಥಾನಗಳ ನಗರಸಭೆಯಲ್ಲಿ ಕಾಂಗ್ರೆಸ್​ನ 16 ಸದಸ್ಯರಿದ್ದು, ಬಿಜೆಪಿಯ 11 ಸದಸ್ಯರಿದ್ದಾರೆ. ನಾಲ್ವರು ಪಕ್ಷೇತರರಿದ್ದು, ಅದರಲ್ಲಿ ಮೂವರು ಕಾಂಗ್ರೆಸ್ ಬೆಂಬಲಿತರಿದ್ದಾರೆ. ಇದರಿಂದ ಕಾಂಗ್ರೆಸ್​ಗೆ ಅಧಿಕಾರ ಹಿಡಿಯುವುದು ಸಲೀಸು. ಆದರೂ ಬಿಜೆಪಿ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎನ್ನಲಾಗಿದೆ.

    ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯೆ ಯಾಸ್ಮಿನ್ ಕಿತ್ತೂರು, ಶಿಲ್ಪಾ ಕೊಡೆ ಹಾಗೂ ಸರಸ್ವತಿ ರಜಪೂತ ನಡುವೆ ಪೈಪೋಟಿ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ ನಂದೀಶ ಮುಂಗರವಾಡಿ, ಸಂಜಯ ನಂದ್ಯಾಳಕರ ಮತ್ತು ಸುಧಾ ರಾಮಲಿಂಗ ಜಾಧವ ಪ್ರಬಲ ಆಕಾಂಕ್ಷಿಗಳು.

    ಅಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಿರುವುದರಿಂದ ಉಪಾಧ್ಯಕ್ಷ ಸ್ಥಾನವನ್ನು ಪುರುಷರಿಗೆ ನೀಡುವ ಸಾಧ್ಯತೆ ಹೆಚ್ಚಿದೆ. ಜಾತಿ ಸಮೀಕರಣದಲ್ಲಿ ಅಧಿಕಾರ ನೀಡಿ, ಎಲ್ಲ ಸಮುದಾಯದವರನ್ನೂ ಸಮಾಧಾನಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾವುದಕ್ಕೂ ಕ್ಷೇತ್ರದ ಕೈ ಹೈಕಮಾಂಡ್ ದೇಶಪಾಂಡೆ ಅವರ ನಿರ್ಧಾರವೇ ಅಂತಿಮವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts