More

    ದಾಂಡೇಲಿಯಲ್ಲೇ ಖೋಟಾ ನೋಟು ಮುದ್ರಣ

    ಕಾರವಾರ/ದಾಂಡೇಲಿ: ದಾಂಡೇಲಿ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ದಾಂಡೇಲಿಯಲ್ಲಿ ಬಂಧಿಸಲಾಗಿದೆ ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.
    ಖೋಟಾ ನೋಟು ಖರೀದಿಗೆ ಬೆಳಗಾವಿ ವ್ಯಕ್ತಿಗಳ ಜತೆ ಡೀಲಿಂಗ್ ನಡೆಸಿದ್ದ ಸರ್ಫರಾಜ್ ಎಂಬಾತ ಬಂಧಿತ ಆರೋಪಿ. ಪ್ರಕಣದ ಪ್ರಮುಖ ಆರೋಪಿ ಕಿಂಗ್​ಪಿನ್ ವಿಜಯ್ ಎಂಬಾತನಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ. ಇದುವರೆಗೆ ಖೋಟಾ ನೋಟು ವ್ಯವಹಾರಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
    ಜೂನ್ 1ರಂದು ದಾಂಡೇಲಿ ಭರ್ಚಿ ವೃತ್ತದ ಬಳಿ ಕಾರಿನಲ್ಲಿ ಕುಳಿತು ಖೋಟಾ ನೋಟು ವ್ಯವಹಾರ ನಡೆಸುತ್ತಿದ್ದವರ ಮೇಲೆ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದರು. ಅವರಿಂದ 4.5 ಲಕ್ಷ ರೂ. ಅಸಲಿ ನೋಟು ಹಾಗೂ 9 ಲಕ್ಷ ರೂ. ನಕಲಿ ನೋಟುಗಳು, 2 ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಶಬ್ಬಿರ್ ಇಸ್ಮಾಯಿಲ್ ಕುಟ್ಟಿ ನೀಡಿದ ಮಾಹಿತಿ ಆಧಾರದ ಮೇಲೆ ವನಶ್ರೀ ನಗರದ ಶಿವಾಜಿ ಕಾಂಬಳೆ ಎಂಬಾತನ ಮನೆ ಮೇಲೆ ದಾಳಿ ನಡೆಸಿ 63.43 ಲಕ್ಷ ರೂ. ನಕಲಿ ನೋಟುಗಳು ಹಾಗೂ ಕಟಿಂಗ್ ಯಂತ್ರವನ್ನು ವಶಕ್ಕೆ ಪಡೆದಿದ್ದರು.
    ತನಿಖೆ ಮುಂದುವರಿಸಿದ ಪೊಲೀಸರಿಗೆ ನೋಟುಗಳು ದಾಂಡೇಲಿಯಲ್ಲೇ ಮುದ್ರಣವಾಗುತ್ತಿದ್ದವು ಎಂಬುದು ಖಚಿತವಾಗಿದೆ. ಪ್ರಿಂಟಿಗ್ ಪ್ರೆಸ್ ಇಟ್ಟುಕೊಂಡಿದ್ದ ವಿಜಯ್ ಎಂಬಾತ ನೋಟುಗಳನ್ನು ಮುದ್ರಿಸುತ್ತಿದ್ದ ಎನ್ನಲಾಗಿದ್ದು, ಆತನ ಮನೆಯಲ್ಲಿ ನೋಟು ಮುದ್ರಿಸುತ್ತಿದ್ದ ಯಂತ್ರಗಳು ಹಾಗೂ ಸಾಕಷ್ಟು ದಾಖಲೆಗಳು ಲಭ್ಯವಾಗಿವೆ. ಆದರೆ, ಆತ ಪ್ರಕರಣ ಬಯಲಾದಾಗಿನಿಂದ ನಾಪತ್ತೆಯಾಗಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts