More

    ದಶಕದ ಕನಸು ನನಸಾದ ಸಂಭ್ರಮ

    ಲಕ್ಷ್ಮೀಕಾಂತ್ ಕುಲಕಣರ್ಿ ಯಾದಗಿರಿ
    ನಗರ ಹೊರವಲಯದಲ್ಲಿರುವ ಸಕರ್ಾರಿ ವೈದ್ಯಕೀಯ (ಯಿಮ್ಸ್) ಕಾಲೇಜಿಗೆ ಪ್ರಸಕ್ತ ವರ್ಷದಿಂದ ಪ್ರವೇಶ ಪ್ರಕ್ರಿಯೆ ಆರಂಭಿಸುವಂತೆ ರಾಷ್ಟ್ರೀಯ ಆರೋಗ್ಯ ಆಯೋಗ ನಿದರ್ೇಶನ ನೀಡಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ದಶಕದ ಕನಸು ನನಸಾದ ಸಂಭ್ರಮ ಮನೆ ಮಾಡಿದೆ.

    ಯಾದಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡೀನ್ಗೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (ಎನ್ಎಂಸಿ) ಪತ್ರ ಬರೆದಿದ್ದು, 2022-23ರಲ್ಲಿ 150 ಸೀಟು ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಜಿಲ್ಲಾಸ್ಪತ್ರೆ ಹಿಂಭಾಗದಲ್ಲಿ ಯಿಮ್ಸ್ ಹಬ್ ನಿಮರ್ಾಣ ಹಂತದಲ್ಲಿದೆ. ಕೇಂದ್ರದ ಶೇ.60, ರಾಜ್ಯದ ಶೇ.40ರ ಅನುಪಾತದಲ್ಲಿ ಅಂದರೆ 360 ಕೋಟಿ ರೂ. ವೆಚ್ಚದಲ್ಲಿ ನಿಮರ್ಾಣವಾಗುತ್ತಿರುವ ಈ ಮೆಡಿಕಲ್ ಕಾಲೇಜು ಯಾವ ಜಿಲ್ಲೆಗೂ ಕಮ್ಮಿ ಇಲ್ಲದಂತಿರಲಿದೆ.

    ವೈದ್ಯ ವಿದ್ಯಾಥರ್ಿಗಳಿಗೆ ತರಗತಿ ಕೋಣೆ, ಅತ್ಯಾಧುನಿಕ ದಜರ್ೆ ಲ್ಯಾಬ್, ಸಭಾಂಗಣ, ಸಂಶೋಧನಾ ವಿಭಾಗಗಳು, ಶಸ್ತ್ರಚಿಕಿತ್ಸಾ ಕೊಠಡಿಗಳು, ವಿದ್ಯಾಥರ್ಿ, ಬೋಧಕ-ಬೋಧಕೇತರ ಸಿಬ್ಬಂದಿಗೆ ಪ್ರತ್ಯೇಕ ವಸತಿ ನಿಲಯ ಇತರ ಸೌಲಭ್ಯಗಳನ್ನು ಕಟ್ಟಡ ಒಳಗೊಂಡಿದೆ. ಶೇ.45 ಕಾಮಗಾರಿ ಪೂರ್ಣಗೊಂಡಿದೆ. ಈ ಹಂತದಲ್ಲಿ ರಾಷ್ಟ್ರೀಯ ಆರೋಗ್ಯ ಆಯೋಗ ತರಗತಿ ಆರಂಭಿಸಿ ಎಂದು ನಿದರ್ೇಶನ ನೀಡಿರುವುದು ಜನರ ಖುಷಿ ಇಮ್ಮಡಿಗೊಳಿಸಿದೆ.

    ಯಾದಗಿರಿ ಜಿಲ್ಲೆ ಆಗಬೇಕೆಂಬ ಹೋರಾಟ ಎಷ್ಟು ಪ್ರಭಾವಶಾಲಿಯಾಗಿ ನಡೆಸಿತ್ತೋ, ಅಷ್ಟೇ ಚಳವಳಿಗಳು ನಮಗೆ ಮೆಡಿಕಲ್ ಕಾಲೇಜು ಬೇಕು ಎಂದು ಸಕರ್ಾರದ ಗಮನ ಸೆಳೆದಿದ್ದವು.
    ಇನ್ನು ಕಾಲೇಜು ಆರಂಭದಿಂದ ಆ ಭಾಗದ ಜಮೀನಿಗೆ ಚಿನ್ನದ ಬೆಲೆ ಬರಲಿದೆ. ನಗರ ಬೆಳವಣಿಗೆಗೂ ಸಹಕಾರಿಯಾಗಲಿದ್ದು, ಜಿಲ್ಲೆಯ ಬಡ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಉನ್ನತ ಶಿಕ್ಷಣ ಸಿಗಲಿದೆ. ಗೂಡಂಗಡಿ, ಲಾಂಡ್ರಿ, ಖಾನಾವಳಿ, ಟೀ ಸ್ಟಾಲ್ ಹೀಗೆ ಸಾವಿರಾರು ಸಣ್ಣಪುಟ್ಟ ವ್ಯಾಪಾರ ಶುರುವಾಗಿ ಬಡ ಕುಟುಂಬಗಳು ಸ್ವಾಭಿಮಾನದ ಜೀವನ ಆರಂಭಿಸಲು ಕಾಲೇಜು ಪ್ರೇರಣೆ ಆಗುವುದರಲ್ಲಿ ಎರಡು ಮಾತಿಲ್ಲ.

    ಕೊಟ್ಟ ಮಾತು ಉಳಿಸಿಕೊಂಡ ಬಿಎಸ್ವೈ: 2008ರ ವಿಧಾನಸಭೆ ಚುನಾವಣೆ ವೇಳೆ ಬಿ.ಎಸ್. ಯಡಿಯೂರಪ್ಪ ನಮ್ಮ ಸಕರ್ಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಯಾದಗಿರಿ ಜಿಲ್ಲೆ ಘೋಷಿಸುವುದಾಗಿ ಮಾತು ಕೊಟ್ಟಿದ್ದರು. ಆಡಿದ ಮಾತಿನಿಂದ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿ ಘೋಷಣೆ ಮಾಡಿಬಿಟ್ಟರು. ಅದರಂತೆ 2019ರಲ್ಲಿ ಪ್ರವಾಹ ಸ್ಥಿತಿ ವೀಕ್ಷಿಸಲು ಆಗಮಿಸಿದ್ದ ಅಂದಿನ ಸಿಎಂ ಬಿಎಸ್ವೈ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿಲ್ಲ ಎಂಬ ಮಾಹಿತಿ ತಿಳಿದು ಕ್ಷಣಕಾಲ ಅಚ್ಚರಿಗೊಂಡಿದ್ದರು. ತಕ್ಷಣ ಇದಕ್ಕೆ ಬೇಕಾದ ಕಾರ್ಯ ಆರಂಭಿಸುವಂತೆ ಸಕರ್ಾರದ ಪ್ರಧಾನ ಕಾರ್ಯದಶರ್ಿಗೆ ಸೂಚನೆ ನೀಡಿ ಕೊಟ್ಟ ಮಾತು ಉಳಿಸಿಕೊಂಡಿದ್ದನ್ನು ಸ್ಮರಿಸಬಹುದು.

    ಮುದ್ನಾಳ್ ಸಹೋದರರಿಗೆ ಸವಾಲ್ ಆಗಿದ್ದ ಯಿಮ್ಸ್: ಹಾಗೆ ನೋಡಿದರೆ ಯಾದಗಿರಿ ಜಿಲ್ಲೆಯಾಗುವಲ್ಲಿ ಮುದ್ನಾಳ್ ಮನೆತನದ ಪಾತ್ರವೂ ಇದೆ. 2008ರಲ್ಲಿ ಬಿಜೆಪಿ ಅಭ್ಯಥರ್ಿ ಗೆಲ್ಲಿಸಿದರೆ ನಿಮಗೆ ಜಿಲ್ಲೆ ಗಿಫ್ಟ್ ನೀಡುವೆ ಎಂದು ಬಿಎಸ್ವೈ ವಾಗ್ದಾನ ಮಾಡಿದ್ದರು. ಡಾ.ವೀರಬಸವಂತರಡ್ಡಿ ಮುದ್ನಾಳ್ಗೆ ಅದೃಷ್ಟ ಕೈಕೊಟ್ಟಿತ್ತು. ಆದರೂ ಯಡಿಯೂರಪ್ಪ ಮಾತ್ರ ಆಡಿದ ಮಾತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಎಷ್ಟೇ ಒತ್ತಡವಿದ್ದರೂ ಜಿಲ್ಲಾ ಘೋಷಣೆ ಮಾಡಿದರು. ಕಳೆದ ಚುನಾವಣೆಯಲ್ಲಿ ವೆಂಕಟರಡ್ಡಿ ಮುದ್ನಾಳ್ ಅವರನ್ನು ಅನಿರೀಕ್ಷಿತ ಎಂಬಂತೆ ಯಾದಗಿರಿ ಕ್ಷೇತ್ರಕ್ಕೆ ಡೆಪ್ಯೂಟ್ ಮಾಡಲಾಯಿತು. ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಯಿಮ್ಸ್ ಜಾರಿ ಮಾಡುವ ಭರವಸೆಯೂ ಸೇರಿತ್ತು. ಹೀಗಾಗಿ ಮುದ್ನಾಳ್ ಬ್ರದಸರ್್ ಇದೊಂದು ಸವಾಲು ಎಂಬಂತೆ ಪರಿಗಣಿಸಿದ್ದು ಸುಳ್ಳಲ್ಲ.

    ನನಗಾದ ಸಂತಸಕ್ಕೆ ಪಾರವೇ ಇಲ್ಲ ಎಂದು ಹೇಳಬಹುದು. ಜಿಲ್ಲೆಗೆ ಮೆಡಿಕಲ್ ಕಾಲೇಜು ದಕ್ಕಿದ ಸಂದರ್ಭದಲ್ಲೇ ಸಾಕಷ್ಟು ಸಂತಸಪಟ್ಟಿದ್ದೆ. ಇದೀಗ ಆ ಕಾಲೇಜು ಅಧಿಕೃತ ಆರಂಭಗೊಳ್ಳುವ ಹೊಸ್ತಿಲಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸಕರ್ಾರಕ್ಕೆ ನಾನು ಋಣಿಯಾಗಿದ್ದೇನೆ.
    | ವೆಂಕಟರಡ್ಡಿ ಮುದ್ನಾಳ್
    ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts