More

    ದಳಪತಿಗಳ ಪ್ರತಿಷ್ಠೆ ಕಣವಾದ ಮೈಮುಲ್ ಚುನಾವಣೆ ; 15 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ಮತದಾನ

    ಮೈಸೂರು: ದಳಪತಿಗಳ ನಡುವೆಯೇ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ(ಮೈಮುಲ್) ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯಲಿದೆ.

    ಆಲನಹಳ್ಳಿಯ ಕೆಎಂಎಫ್ ತರಬೇತಿ ಕೇಂದ್ರದ ಆವರಣದಲ್ಲಿ ಬೆಳಗ್ಗೆ 9ರಿಂದ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲೇ ಸಂಜೆ 4.30ರಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ರಾತ್ರಿ 8ರ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

    ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದ ಬಳಿಕ ನಿರ್ದೇಶಕ ಸ್ಥಾನಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಬೈಲಾ ತಿದ್ದುಪಡಿ ಮಾಡಿ ಆರು ಸ್ಥಾನಗಳನ್ನು ಹೆಚ್ಚಿಸಲಾಗಿದೆ. ಹೊಸದಾಗಿ ಮೈಸೂರು ಉಪ ವಿಭಾಗದಿಂದ 7 ಮತ್ತು ಹುಣಸೂರು ಉಪ ವಿಭಾಗಕ್ಕೆ 8 ಸ್ಥಾನಗಳು ಸೇರಿದಂತೆ ಒಟ್ಟು 15 ನಿರ್ದೇಶಕರ ಸ್ಥಾನಗಳಿವೆ. ಈ ಪೈಕಿ ಮಹಿಳೆಯರಿಗೆ ನಾಲ್ಕು ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಮೈಸೂರು ಉಪ ವಿಭಾಗದ ಏಳು ನಿರ್ದೇಶಕರ ಸ್ಥಾನಗಳಿಗೆ 15 ಜನರು ಕಣದಲ್ಲಿದ್ದು, ಇದರಲ್ಲಿ ಮಾಜಿ ಅಧ್ಯಕ್ಷರು, ನಿರ್ದೇಶಕರು ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಏಳು ಸ್ಥಾನಗಳಲ್ಲಿ ಇಬ್ಬರು ಮಹಿಳೆಯರಿಗೆ ಮೀಸಲಿದ್ದು, ಇದಕ್ಕೆ ನಾಲ್ವರು ಸ್ಪರ್ಧಿಸಿದ್ದರೆ, ಮಾಜಿ ಶಾಸಕ, ಜಿಪಂ ಮಾಜಿ ಅಧ್ಯಕ್ಷೆಯಾಗಿದ್ದ ಸುನಿತಾ ವೀರಪ್ಪಗೌಡ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. 417 ಮತದಾರರಿದ್ದಾರೆ.
    ಹುಣಸೂರು ಉಪ ವಿಭಾಗದಲ್ಲಿ 8 ಸ್ಥಾನಗಳಿಗೆ 14 ಜನರು ಸ್ಪರ್ಧಿಸಿದ್ದಾರೆ. 8 ಸ್ಥಾನಗಳಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಿರಿಸಿದ್ದು, ಈ ಎರಡು ಸ್ಥಾನಗಳಿಗೆ ಮೂವರು ಮಹಿಳೆಯರು ಸ್ಪರ್ಧಿಸಿದ್ದಾರೆ. 630 ಮತದಾರರಿದ್ದಾರೆ.

    ಎರಡೂ ವಿಭಾಗಗಳಿಂದ ಚುನಾವಣಾ ಕಣದಲ್ಲಿ ಒಟ್ಟು 29 ಸ್ಪರ್ಧಿಗಳಿದ್ದು, 1047 ಮತದಾರರಿದ್ದಾರೆ. ಚುನಾವಣಾ ಪ್ರಕ್ರಿಯೆಗಾಗಿ ನಾಲ್ಕು ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ಮೈಸೂರು ಉಪ ವಿಭಾಗ ಹಾಗೂ ಹುಣಸೂರು ಉಪ ವಿಭಾಗಗಳಿಗೆ ತಲಾ ಎರಡು ಬೂತ್‌ಗಳನ್ನು ಸ್ಥಾಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts