More

    ದಲ್ಲಾಳಿಗಳ ವಿರುದ್ಧ ಕ್ರಮಕ್ಕೆ ಮನವಿ

    ಧಾರವಾಡ: ಲಾಕ್​ಡೌನ್​ನಿಂದ ತತ್ತರಿಸಿರುವ ಮಾವು ಬೆಳೆಗಾರರು ದಲ್ಲಾಳಿಗಳ ಕಮಿಷನ್​ನಿಂದ ನಲುಗಿ ಹೋಗಿದ್ದಾರೆ. ತಾಲೂಕಿನ ಯರಿಕೊಪ್ಪ ಕ್ರಾಸ್​ನಲ್ಲಿರುವ ಮಾವಿನ ಹಣ್ಣಿನ ಕಮಿಷನ್ ಏಜೆಂಟರು ರೈತರಿಂದ ಅಕ್ರಮವಾಗಿ ಶೇ. 10ರಿಂದ 12ರಷ್ಟು ಕಮಿಷನ್ ವಸೂಲಿ ಮಾಡುತ್ತಿರುವುದು ಕಾನೂನುಬಾಹಿರವಾಗಿದೆ. ಜಿಲ್ಲಾಡಳಿತ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಎಚ್. ಕೋರವರ ಆಗ್ರಹಿಸಿದ್ದಾರೆ.

    ಈ ಕುರಿತು ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕರು ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ಬುಧವಾರ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ಪರವಾನಗಿ ರದ್ದುಪಡಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ವರ್ಷಪೂರ್ತಿ ಮಳೆ, ಗಾಳಿ ಲೆಕ್ಕಿಸದೆ ಹಗಲು ರಾತ್ರಿ ದುಡಿಯುವ ರೈತರಿಗೆ ಅನ್ಯಾಯವಾಗುತ್ತಿದೆ. ಗಾಡಿಯಿಂದ ಅಂಗಡಿಗೆ ಮಾವಿನ ಹಣ್ಣನ್ನು ತರಲು 1 ಟ್ರೇಗೆ 3 ರೂ. ಲೋಡಿಂಗ್-ಅನ್ ಲೋಡಿಂಗ್ ಖರ್ಚನ್ನು ರೈತರಿಂದ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ ಖಾಲಿ ಟ್ರೇಗಳನ್ನು ರೈತರಿಗೆ ಮರಳಿಸುತ್ತಿಲ್ಲ. ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮೌನ ತೊರೆದು ರೈತರ ಶೋಷಣೆ ತಪ್ಪಿಸಬೇಕು. ತಪ್ಪಿತಸ್ಥ ದಲ್ಲಾಳಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋರವರ ಕೋರಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts