More

    ದರ ನಿಗದಿಪಡಿಸಿಯೇ ಕಬ್ಬು ಕಟಾವು ಮಾಡಿ

    ಮಾಂಜರಿ, ಬೆಳಗಾವಿ: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಗಡಿಭಾಗದ ಸಕ್ಕರೆ ಕಾರ್ಖಾನೆಗಳು ಪ್ರತಿಟನ್ ಕಬ್ಬಿಗೆ ದರ ನಿಗದಿಪಡಿಸಬೇಕು. ಆಮೇಲೆ ಕಬ್ಬು ಕಟಾವು ಮಾಡಲು ಮುಂದಾಗಬೇಕು. ದರ ನಿಗದಿಪಡಿಸದೇ ಕಬ್ಬು ಕಟಾವಿಗೆ ಮುಂದಾದರೆ ಉಗ್ರ ಹೋರಾಟ ಮಾಡುವುದಾಗಿ ಸ್ವಾಭಿಮಾನಿ ರೈತ ಸಂಘಟನೆ ಹಾಗೂ ರಾಜ್ಯ ರೈತ ಸಂಘಟನೆಯ ಸದಸ್ಯರು ಗಳತಗಾ ಗ್ರಾಮದಲ್ಲಿ ಕಬ್ಬು ಕಟಾವು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ರೈತ ಸಂಘಟನೆಯ ಕಾರ್ಯಾಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂದು ಹೋರಾಟ ಮಾಡುತ್ತಲೇ ಇದ್ದೇವೆ. ಆದರೂ ದರ ಲಭಿಸುತ್ತಿಲ್ಲ. ಹಾಗಾಗಿ, ಯೋಗ್ಯ ದರ ಸಿಗುವವರೆಗೂ ರೈತರು ಕಬ್ಬು ಕಟಾವು ಮಾಡಲು ಗಡಿಬಿಡಿ ಮಾಡಬಾರದು. ಎಲ್ಲ ಕಬ್ಬು ಉತ್ಪಾದಕರಿಗೆ ಲಾಭವಾಗಬೇಕು ಎಂಬ ಉದ್ದೇಶದಿಂದ ಸಂಘಟನೆಗಳು ಹೋರಾಟ ಮಾಡುತ್ತಿದ್ದು ರೈತರು ಕೆಲ ದಿನಗಳ ಕಾಲ ಕಬ್ಬು ಕಟಾವು ಮಾಡಲು ಮುಂದಾಗಬಾರದು ಎಂದು ಮನವಿ ಮಾಡಿದರು.


    ಚಿಕ್ಕೋಡಿ ಜಿಲ್ಲಾ ಸ್ವಾಭಿಮಾನಿ ರೈತ ಸಂಘಟನೆ ಅಧ್ಯಕ್ಷ ಸುಭಾಷ ಚೌಗುಲೆ ಮಾತನಾಡಿ, ಯಾವುದೇ ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರ ಘೋಷಣೆ ಮಾಡಬೇಕು. ಆಮೇಲೆ ರೈತರ ಕಬ್ಬು ಕಟಾವು ಮಾಡಬೇಕು. ದರ ಘೋಷಣೆ ಮಾಡದೆ ಕಬ್ಬು ಕಟಾವಿಗೆ ಮುಂದಾದರೆ ಕಾರ್ಖಾನೆಗಳ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

    ರಾಕೇಶ ಪಾಟೀಲ, ತಾತ್ಯಾಸಾಹೇಬ ಹುಳಿಕೊಪ್ಪ, ಉಮೇಶ ಪಾಟೀಲ, ಉದಯ ಚೌಗುಲೆ, ತಾತ್ಯಾಸಾಬ ಕೇಸ್ತೆ, ಸಮ್ಮೇದ ಹುಳಿಕೊಪ್ಪ, ಉಮೇಶ ಸಿದ್ಧಪ್ಪಗೋಳ, ಸಿದಗೌಡ ಮತ್ತು ರಾಮಗೌಡ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts