More

    ದರ್ಬಾರ್ ಸಿನಿಮಾ ಬಿಡುಗಡೆ

    ದಾವಣಗೆರೆ: ಗ್ರಾಮೀಣ ಭಾಗದ ರಾಜಕೀಯ ಕುರಿತಾದ ಸಂಪೂರ್ಣ ಹಾಸ್ಯ, ವಿಡಂಬನೆ ಮತ್ತು ಉತ್ತಮ ಸಾಮಾಜಿಕ ಸಂದೇಶವುಳ್ಳ ‘ದರ್ಬಾರ್’ ಸಿನಿಮಾ , ಜೂ.9 ರಂದು ರಾಜ್ಯದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ವಿ. ಮನೋಹರ್ ತಿಳಿಸಿದರು.

    ಓ ಮಲ್ಲಿಗೆ, ಇಂದ್ರಧನುಷ್ ಬಳಿಕ 23 ವರ್ಷ ನಿರ್ದೇಶನ ಮಾಡಿರಲಿಲ್ಲ. ಸತೀಶ್ ಅವರ ಕಥೆ ಕೇಳಿ ಇಷ್ಟವಾಗಿ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಹಳ್ಳಿಯೊಂದರ ರಾಜಕೀಯ, ಅಶಿಕಾರಕ್ಕಾಗಿ ನಡೆಸುವ ಕಸರತ್ತು ಮುಂತಾದ ಘಟನೆಗಳೊಂದಿಗೆ ಸಿನಿಮಾ ಸಾಗುತ್ತದೆ. ಕರೊನಾ ಪೂರ್ವದಲ್ಲೇ ಚಿತ್ರ ಕೈಗೆತ್ತಿಕೊಂಡರೂ ಕರೊನಾ ನಂತರ ಚಿತ್ರೀಕರಣ ಮಾಡಲಾಯಿತು. ಪಾತ್ರಗಳಿಗೆ ಹೊಂದುವ ಸೂಕ್ತ ತಾರಾಗಣವನ್ನೇ ಆಯ್ಕೆ ಮಾಡಲಾಗಿದೆ. ಉತ್ತಮ ಸಾಮಾಜಿಕ ಸಂದೇಶ, ವಿಡಂಬನೆಯ ಚಿತ್ರ ನೀಡಿದ ತೃಪ್ತಿ ಇಡೀ ತಂಡಕ್ಕಿದೆ ಎಂದು ತಿಳಿಸಿದರು.
    ಹಾಸ್ಯ ಎಂದರೆ ದ್ವಂದ್ವಾರ್ಥವಲ್ಲ. ಅಶ್ಲೀಲ, ಅಸಭ್ಯವಲ್ಲ. ನವಿರು ಹಾಸ್ಯವನ್ನು ಚಿತ್ರದಲ್ಲಿ ತರಲಾಗಿದೆ. ಚಿತ್ರದಲ್ಲಿನ ಸನ್ನಿವೇಶವೇ ಹಾಸ್ಯ ಸೃಷ್ಟಿಸುತ್ತದೆ. ಪ್ರತಿಯೊಬ್ಬ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ. ಪ್ರೇಕ್ಷಕರು ಆರ್ಶೀರ್ವದಿಸಬೇಕು ಎಂದರು.
    ಚಿತ್ರದ ನಾಯಕ ನಟ ಸತೀಶ್ ಮಾತನಾಡಿ, ಹಳ್ಳಿಗಳಲ್ಲಿ ನೈತಿಕ ಪೊಲೀಸ್‌ಗಿರಿ ತೋರುವ ರಾಜಕಾರಣಿಗಳ ದರ್ಬಾರಿನ ಪ್ರತಿರೂಪವಾಗಿ ಚಿತ್ರಕ್ಕೆ ಸೂಕ್ತ ಹೆಸರಿಡಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಮಂಡ್ಯ, ಗೋವಾ, ಕೋಲಾರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಪಿ.ಎನ್.ಶಿಲ್ಪಾ ಚಿತ್ರದ ನಿರ್ಮಾಪಕರು. ವಿ.ಮನೋಹರ್ ನಿರ್ದೇಶನ ನೋಡುಗರ ಮನ ತಟ್ಟ್ಪಲಿದೆ ಎಂದು ಹೇಳಿದರು.
    ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯನಟ ಸಂತೋಷ್, ರಾಕೇಶ್ ಜಾಧವ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts