More

    ದಯವೇ ಧರ್ಮದ ತಳಹದಿ

    ಬಸವಕಲ್ಯಾಣ: ಜಗದ್ಗುರು ಶ್ರೀ ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಮೂಲಕ ಜಗತ್ತಿನ ಮನುಕುಲಕ್ಕೆ ಅಹಿಂಸಾ, ಸತ್ಯ, ಅಸ್ತೇಯ, ದಯಾ, ಕ್ಷಮಾ ಮೊದಲಾದ ದಶ ಧರ್ಮ ತತ್ವಗಳನ್ನು ಬೋಧಿಸಿದ್ದಾರೆ. ಅದೇ ರೀತಿ ಬಸವಣ್ಣನವರು ವಚನದ ಮೂಲಕ ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದ್ದಾರೆ. ಹೀಗಾಗಿ ದಯೆ ಧರ್ಮದ ತಳಹದಿ ಎಂದು ತಡೋಳಾ ಶ್ರೀ ರಾಜೇಶ್ವರ ಶಿವಾಚಾರ್ಯರು ನುಡಿದರು.

    ಸಂಸ್ಥಾನ ಗವಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕದ ಆಶ್ರಯದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ವಿಶೇಷ ಉಪನ್ಯಾಸ ಮಾಲೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗವಿಮಠದಿಂದ ಧಾಮರ್ಿಕ ಕಾರ್ಯದ ಜತೆಗೆ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನೇತೃತ್ವ ವಹಿಸಿದ್ದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಮನಸ್ಸಿನ ಚಂಚಲತೆಗೆ ಇಂದ್ರಿಯಗಳೇ ಕಾರಣ. ಹೀಗಾಗಿ ಮನಸ್ಸನ್ನು ಶಿವನಲ್ಲಿ ಲೀನವಾಗಿಸಿದಾಗ ಇವುಗಳ ನಿಯಂತ್ರಣ ಸಾಧ್ಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ಮುಖಂಡ ಅಜರ್ುನ ಕನಕ ಮಾತನಾಡಿ, ಗವಿಮಠವು ಸರ್ವಧರ್ಮದ ಕೇಂದ್ರವಾಗಿದೆ. ಅಭಿನವ ಶ್ರೀಗಳು ಪಟ್ಟದ್ದೇವರಾದ ನಂತರ ಮಠದ ಪರಂಪರೆ ಮುಂದುವರಿಸಿಕೊಂಡು ಬರುವ ಜತೆಗೆ ಸಮಾಜಪರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದರು.

    ಶಿಕ್ಷಕ ಅಂಬಾರಾಯ ಉಗಾಜಿ ಮಾತನಾಡಿದರು. ಶರಣಯ್ಯ ಸ್ವಾಮಿ ಇತರರಿದ್ದರು. ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ ಸ್ವಾಗತಿಸಿದರು. ಶಕುಂತಲಾ ಗುರುಲಿಂಗಯ್ಯ ಪ್ರರ್ಥನಾ ಗೀತೆ ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts