More

    ತೋಟ, ಜಮೀನುಗಳು ಜಲಾವೃತ

    ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ರಸ್ತೆಗಳು ಕೊಚ್ಚಿ ಹೋದರೆ, ಹಳ್ಳ-ಕೊಳ್ಳಗಳಲ್ಲಿ ನುಗ್ಗಿದ ನೀರು ತೋಟ ಹಾಗೂ ಕೃಷಿ ಜಮೀನುಗಳನ್ನು ಆವರಿಸಿಕೊಂಡಿದೆ.

    ನುಗ್ಗೇಹಳ್ಳಿ ಗ್ರಾಮದ ಐತಿಹಾಸಿಕ ಹಿರೇಕೆರೆಯು ತುಂಬಿ ಕೋಡಿಯ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದು ಮನೆ ಹಾಗೂ ಅಂಗಡಿ-ಮುಂಗ್ಗಟ್ಟುಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟವಾಗಿದೆ. ದಿನಬಳಕೆ ವಸ್ತುಗಳು ನೀರುಪಾಲಾಗಿದ್ದು ಮನೆ-ಮಕ್ಕಳೆಲ್ಲ ಕುರ್ಚಿ ಹಾಗೂ ಮಂಚಗಳ ಮೇಲೆ ಕುಳಿತು ರಾತ್ರಿ ಕಳೆಯಬೇಕಾಯಿತು. ಬೆಳಗ್ಗೆ ಎದ್ದು ಮನೆಯಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಹಾಕುವುದೇ ದೊಡ್ಡ ಕೆಲಸವಾಗಿತ್ತು. ಇನ್ನು ಹಿರೀಸಾವೆ ಹೋಬಳಿ ಪುರ ಗ್ರಾಮದ ಊರ ಪಕ್ಕದಲ್ಲಿರುವ ಕಟ್ಟೆ ತುಂಬಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಸದ್ಯ ಯುವಕರೆಲ್ಲ ಸೇರಿ ಸಿಮೆಂಟ್ ಪೈಪ್ ಒಂದನ್ನು ಅಳವಡಿಸಿ ಹಳ್ಳದ ಮೂಲಕ ನೀರನ್ನು ಕೆರೆಗೆ ಹೋಗುವಂತೆ ಮಾಡಿ ಅನಾಹುತ ತಪ್ಪಿಸಿದರು.

    ಬಾಗೂರು ಕೆರೆ ತುಂಬಿ ಕೋಡಿಯ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರಭಸದೊಂದಿಗೆ ನೀರು ಹರಿಯುತ್ತಿದ್ದು, ಗುಲಸಿಂದ, ಬಾಳೆಕೊಪ್ಪಲು ಹಾಗೂ ವಿವಿಧ ಗ್ರಾಮಗಳ ಜಮೀನುಗಳಿಗೆ ಹಳ್ಳ-ಕೊಳ್ಳಗಳ ಮೂಲಕ ನುಗ್ಗಿ ಹೊಲ, ಗದ್ದೆ ಹಾಗೂ ತೋಟಗಳು ಜಲಾವೃತಗೊಂಡಿವೆ.

    ರೈತರು ಕಂಗಾಲು: ಕಬ್ಬು, ಮುಸುಕಿನ ಜೋಳ, ಶುಂಠಿ ಹಾಗೂ ಇತರ ಬೆಳೆಗಳು ನೀರಿನಲ್ಲಿ ಮುಳುಗಿವೆ. ಹಳ್ಳ-ಕೊಳ್ಳಗಳಲ್ಲಿ ಹರಿಯುತ್ತಿರುವ ನೀರಿನಲ್ಲಿ ತೆಂಗಿನ ಕಾಯಿಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ. ಇನ್ನು ಹಳ್ಳದ ಬದಿಯಲ್ಲಿರುವ ಜಮೀನಿನ ಮಣ್ಣು ಕುಸಿಯುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಬಾಗೂರು ಕೆರೆಯ ನೀರು ಎರಡೂ ಕೋಡಿಗಳಲ್ಲಿಯೂ ರಭಸವಾಗಿ ಹರಿಯುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನ ಹಾಗೂ ಜನ ಸಂಚಾರ ಸ್ಥಗಿತಗೊಂಡಿದೆ. ಸಾರಿಗೆ ಬಸ್ ಸಂಚಾರ ಇಲ್ಲದ್ದರಿಂದ ಈ ವ್ಯಾಪ್ತಿಯ ಪ್ರಯಾಣಿಕರಿಗೆ ತೊಂದರೆಯಾಗಿದೆ.

    ತೇರಿನ ಮನೆ ಕುಸಿತ: ಜಂಬೂರು ಗ್ರಾಮದಲ್ಲಿ ತೇರಿನ ಮನೆ ಕುಸಿದಿದ್ದು ಜೆಸಿಬಿ ಹಾಗೂ ಕ್ರೇನ್ ಮೂಲಕ ತೇರನ್ನು ಸುರಕ್ಷಿತವಾಗಿ ಹೊರ ಎಳೆದು ಮನೆಯನ್ನು ತೆರವುಗೊಳಿಸಲಾಗಿದೆ. ತೇರಿನ ಮನೆಯ ಪಕ್ಕದಲ್ಲಿಯೇ ಗ್ರಾಮದ ಕೆಲವರು ಜಾನುವಾರುಗಳನ್ನು ಮೇಯಿಸುತ್ತಿದ್ದರು. ಸದ್ಯ ಎಲ್ಲರೂ ಮನೆ ಕಡೆ ಹೋದ ನಂತರ ಕುಸಿದಿರುವ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು.

    25 ವರ್ಷಗಳ ಬಳಿಕ ತುಂಬಿದ ಕೆರೆ: ತಾಲೂಕಿನ ಯಾಚನಘಟ್ಟ ಗ್ರಾಮದ ಕೆರೆ 25 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಸಂತಸ ತಂದಿದೆ. ದಿಂಡಗೂರು, ಹಿರೀಸಾವೆ, ಮತಿಘಟ್ಟ, ಬಾಳಗಂಚಿ, ದಿಡಗ, ನರಿಹಳ್ಳಿ, ತುಪ್ಪದಹಳ್ಳಿ, ರಂಗನಾಥಪುರ ಸೇರಿದಂತೆ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ.
    ರಸ್ತೆ ಸಂಪರ್ಕ ಬಂದ್:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts