More

    ತೋಟವೇ ನಾಶವಾದ ಮೇಲೆ ಮದ್ದು ಕೊಟ್ಟು ಪ್ರಯೋಜನವೇನು?; ಶಾಸಕರಿಂದ ಕಪಟ ಕಾಳಜಿ ತೋರ್ಪಡಿಕೆ: ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಕಿಡಿ

    ಸಾಗರ: ತಾಲೂಕಿನ ಶರಾವತಿ ಕಣಿವೆ ಪ್ರದೇಶದಲ್ಲಿ ಎರಡು ವರ್ಷಗಳಿಂದಲೂ ಅಡಕೆಗೆ ಕೊಳೆರೋಗ ಬಾಧಿಸುತ್ತಿದೆ. ಸಾಗರ ಕ್ಷೇತ್ರದ ಶಾಸಕರಿಗೆ ಇದೀಗ ಜ್ಞಾನೋದಯವಾಗಿದ್ದು ಅರ್ಧ ಗುಂಟೆಗೆ ಒಂದು ಪ್ಯಾಕೆಟ್ ಔಷಧಿ ನೀಡಿ ಬೆಳೆಗಾರರ ಕಣ್ಣೊರೆಸುವ ಪ್ರಯತ್ನ ಮಾಡುತ್ತಿದ್ದಾರೆ. ತೋಟವೇ ನಶಿಸಿ ಹೋದ ಮೇಲೆ ಔಷಧಿ ಕೊಡುವ ಬದಲು ವಿಷ ಕೊಡಿ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದರು.
    ಶರಾವತಿ ಮುಳುಗಡೆ ಸಂತ್ರಸ್ತರನ್ನು ನಡುನೀರಿನಲ್ಲಿ ಕೈ ಬಿಡುತ್ತಿರುವ ಶಾಸಕರು, ಪ್ರತಿ ಭಾಷಣದಲ್ಲಿ ನಾನು ಮುಳುಗಡೆ ಸಂತ್ರಸ್ತ. ನನಗೆ ಎಲ್ಲಾ ನೋವುಗಳು ಅರ್ಥವಾಗುತ್ತದೆ ಎಂದು ಹೇಳುತ್ತ ಸಂತ್ರಸ್ತರ ಪರವಾಗಿ ಕಪಟ ಕಾಳಜಿ ತೋರಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
    ಕಾಗೋಡು ತಿಮ್ಮಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನ್ನ ತಂದಿದ್ದಾರೆ. ಆದರೆ ಎಂದಿಗೂ ಪ್ರಚಾರ ಬಯಸಲಿಲ್ಲ. ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸಗಳೇ ಮಾತನಾಡುತ್ತವೆ. ಈಗ ಶಾಸಕರು ಎಲ್ಲವೂ ತಾನೇ ಮಾಡಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು, ಕಾಗೋಡು ತಿಮ್ಮಪ್ಪ ಮಂಜೂರಾತಿ ಮಾಡಿಸಿದ್ದ ಹಸಿರುಮಕ್ಕಿ ಸೇತುವೆ ಕಾಮಗಾರಿಯನ್ನು ಮುಂದುವರಿಸದೆ ಈಗ ತಾಂತ್ರಿಕ ಸಮಸ್ಯೆ ಇದೆ ಎಂದು ಕಥೆ ಹೇಳುತ್ತಿದ್ದಾರೆ ಎಂದು ದೂರಿದರು.
    ಗಣಪತಿ ಕೆರೆಯ ಕಾಮಗಾರಿಯ ಕರ್ಮಕಾಂಡದ ಬಗ್ಗೆ ಬಿಜೆಪಿಯವರೇ ಪ್ರತಿಭಟನೆ ಮಾಡಿ ಎಂದು ನನಗೆ ದಾಖಲಾತಿ ತಂದುಕೊಟ್ಟಿದ್ದಾರೆ. ಅಷ್ಟಲ್ಲದೆ ಗಣಪತಿ ಕೆರೆಯ ಅಚ್ಚುಕಟ್ಟುದಾರರಲ್ಲಿ ಹಾಲಪ್ಪನವರಿಗೂ ನೋಟಿಸ್ ನೀಡಲಾಗಿದೆ. ಅವರ ಜಾಗ ಭದ್ರಗೊಳಿಸಿಕೊಳ್ಳಲು ಗಣಪತಿ ಕೆರೆ ಅಭಿವೃದ್ಧಿಯ ನಾಟಕವಾಡುತ್ತಿದ್ದಾರೆ. ಕೆರೆಯ ಹೂಳು ಎತ್ತದೆ ಕೆರೆಯ ಜೊಂಡು ಕಿತ್ತು ಅಭಿವೃದ್ಧಿ ಎಂದು ತೋರಿಸುತ್ತಿರುವುದು ಗೊತ್ತಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts