More

    ತೋಟಗಾರಿಕೆ ಇಲಾಖೆ ಆವರಣದಲ್ಲೇ ಭವನಗಳ ನಿರ್ಮಾಣ

    ಶಿಡ್ಲಘಟ್ಟ: ನಗರದಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲೇ ಅಂಬೇಡ್ಕರ್ ಹಾಗೂ ಜಗಜೀವನರಾಂ ಭವನ ನಿರ್ಮಿಸಲು ಉಪವಿಭಾಗಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರ್ ರಾಜೀವ್‌ಗೆ ಸಂಸದ ಎಸ್.ಮುನಿಸ್ವಾಮಿ ಸೂಚಿಸಿದರು.

    ತಾಲೂಕು ಕಚೇರಿಯಲ್ಲಿ ಗುರುವಾರ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಅಧಿಕಾರಿಗಳ ಸಭೆಯಲ್ಲಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಗರದ ಹೊರವಲಯದಲ್ಲಿ ತಾಲೂಕು ಆಡಳಿತ ಗುರುತಿಸಿರುವ ಜಾಗ ಸರಿಯಿಲ್ಲ ಎಂಬ ಮುಖಂಡರ ಆಕ್ಷೇಪಣೆಗೆ ಸ್ಪಂದಿಸಿದ ಸಂಸದರು, ತೋಟಗಾರಿಕೆ ಇಲಾಖೆ ಆವರಣದಲ್ಲಿಯೇ ಭವನ ನಿರ್ಮಿಸಲು ಸೂಚಿಸಿದರು. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಜಾಗ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

    ಅಗತ್ಯ ಬಿದ್ದಲ್ಲಿ ತೋಟಗಾರಿಕೆ ಇಲಾಖೆಗೆ ಇಲ್ಲಿರುವ ಜಾಗಕ್ಕಿಂತ ದುಪ್ಪಟ್ಟು ಜಾಗವನ್ನು ಬೇರೆಡೆ ನೀಡಲು ಕ್ರಮವಹಿಸಲಾಗುವುದು. ಸ್ಥಳೀಯ ಶಾಸಕರನ್ನೊಳಗೊಂಡಂತೆ ಮುಖಂಡರ ಸಭೆ ನಡೆಸಿ ತೋಟಗಾರಿಕೆ ಇಲಾಖೆ ಆವರಣದಲ್ಲಿಯೇ ಜಾಗ ಮಂಜೂರಾದ ಕೂಡಲೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಮುನಿಸ್ವಾಮಿ ತಿಳಿಸಿದರು.

    ನಗರಸಭೆ ಆಯುಕ್ತ ಶ್ರೀನಿವಾಸ್, ಮುಖಂಡರಾದ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಮೇಲೂರು ಮಂಜುನಾಥ್, ಎನ್.ವೆಂಕಟೇಶ್, ದಡಂಘಟ್ಟ ತಿರುಮಲೇಶ್, ಎಸ್.ಎಂ.ರಮೇಶ್, ದ್ಯಾವಕೃಷ್ಣಪ್ಪ, ಕೃಷ್ಙಮೂರ್ತಿ, ಗುರುಮೂರ್ತಿ, ಈಧರೆ ಪ್ರಕಾಶ್, ನಾಗನರಸಿಂಹ, ದಾಮೋದರ್, ದೇವರಮಳ್ಳೂರು ಕೃಷ್ಣಪ್ಪ ಇತರರಿದ್ದರು.

    ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ದಲಿತರನ್ನು ಊರ ಹೊರಗಡೆ ಇಡಬೇಕೆಂದು ಅಂಬೇಡ್ಕರ್ ಭವನ ನಿರ್ಮಿಸಲು ಹೊರವಲಯದ ಹನುಮಂತಪುರದ ಬಳಿಯ ಸ್ಮಶಾನದ ಪಕ್ಕ ಜಾಗ ಗುರುತಿಸಿ ಪಹಣಿಯಲ್ಲಿ ನಮೂದಿಸಿದ್ದರು. ಭವನ ನಗರದ ಹೃದಯ ಭಾಗದಲ್ಲಿಯೇ ನಿರ್ಮಾಣವಾಗಬೇಕು.
    ಎನ್.ವೆಂಕಟೇಶ್, ದಸಂಸ ಸಂಚಾಲಕ

    ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಿದೆಯಾದರೂ ಈವರೆಗೂ ನಗರದಲ್ಲಿ ಭವನ ನಿರ್ಮಾಣವಾಗದೇ ಇರುವುದಕ್ಕೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗಕ್ಕೆ ದಲಿತರ ಮೇಲಿರುವ ನಿರ್ಲಕ್ಷ್ಯವೇ ಕಾರಣ. ಆದಷ್ಟು ಬೇಗ ತೋಟಗಾರಿಕೆ ಇಲಾಖೆ ಆವರಣ ಅಥವಾ ಅದರ ಪಕ್ಕದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ಭವನ ನಿರ್ಮಾಣವಾಗಬೇಕು.
    ಮೇಲೂರು ಮಂಜುನಾಥ್, ದಸಂಸ ಜಿಲ್ಲಾ ಸಂಚಾಲಕ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts