More

    ತೊಂದರೆಯಲ್ಲಿರುವ ಕಾರ್ವಿುಕರನ್ನು ಗುರುತಿಸಿ

    ಹಾವೇರಿ: ಉದ್ಯೋಗ ಅರಸಿ ಜಿಲ್ಲೆಗೆ ಆಗಮಿಸಿದ ಕಾರ್ವಿುಕರಿಗೆ ಹಾಗೂ ಇತರೆ ರಾಜ್ಯದ ವಲಸೆ ಕಾರ್ವಿುಕರಿಗೆ ಜಿಲ್ಲಾಡಳಿತದಿಂದ ಕಾರ್ವಿುಕ ಇಲಾಖೆ ಮೂಲಕ ಊಟದ ವ್ಯವಸ್ಥೆ, ದಿನಸಿ ಕಿಟ್​ಗಳನ್ನು ವಿತರಣೆ ಮಾಡಲಾಗಿದೆ. ಇನ್ನೂ ನೆರವಿನ ಅಗತ್ಯವಿರುವ ಕಾರ್ವಿುಕರನ್ನು ಗುರುತಿಸಿ ಅವರಿಗೆ ಅನುಕೂಲ ಕಲ್ಪಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಲಸೆ, ಅಸಂಘಟಿತ ಕಾರ್ವಿುಕರಿಗೆ ಅಗತ್ಯವಿರುವ ಆಹಾರ ಸಾಮಗ್ರಿ, ಊಟ ಒದಗಿಸುವ ಕುರಿತು ಕಾರ್ವಿುಕ, ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ಅವರು ಮಾತನಾಡಿದರು.

    ಲಾಕ್​ಡೌನ್ ಅವಧಿಯಲ್ಲಿ ಕಾರ್ವಿುಕರು ಕೆಲಸವಿಲ್ಲದೇ ತೊಂದರೆಯಲ್ಲಿದ್ದಾರೆ. ವಲಸೆ ಕಾರ್ವಿುಕರಿಗೆ ಈಗಾಗಲೇ ವಸತಿ ಹಾಗೂ ಊಟದ ವ್ಯವಸ್ಥೆ, ದಿನಸಿ ಕಿಟ್​ಗಳನ್ನು ವಿತರಿಸಲಾಗಿದೆ. ಇದರ ಹೊರತಾಗಿಯೂ ಈವರೆಗೆ ಅಗತ್ಯ ಆಹಾರ ಸಾಮಗ್ರಿ ದೊರೆಯದೇ ತೊಂದರೆಯಲ್ಲಿರುವವರನ್ನು ಗುರುತಿಸಬೇಕು. ಅವರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲಿ ಕರೊನಾ ಸೋಂಕಿತರು ಪತ್ತೆಯಾದಲ್ಲಿ ಆ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಗುರುತಿಸಿ, ಸೋಂಕು ಹರಡದಂತೆ ತೀವ್ರ ತರವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಆ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳಿಗೆ ಕರೊನಾ ಕುರಿತಂತೆ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಅರಿವು ಮೂಡಿಸಲು ಕ್ರಿಯಾಶೀಲ ಶಿಕ್ಷಕರ ತಂಡಗಳನ್ನು ರಚಿಸಿ ಅಗತ್ಯ ತರಬೇತಿ ನೀಡುವಂತೆ ತಿಳಿಸಿದರು.

    ಡಿಡಿಪಿಐ ಅಂದಾನೆಪ್ಪ ವಡಗೇರಿ, ಕಾರ್ವಿುಕ ಇಲಾಖೆ ಅಧಿಕಾರಿ ಲಲಿತಾ ಸಾತೇನಹಳ್ಳಿ, ಜಿಲ್ಲೆಯ ಎಲ್ಲ ತಾಲೂಕುಗಳ ಬಿಇಒಗಳು, ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳಿದ್ದರು.

    ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಿ: 1ನೇ ಹಂತದಲ್ಲಿ ಕಾರ್ವಿುಕ ಇಲಾಖೆಯಿಂದ ನೋಂದಾಯಿತ ಕಟ್ಟಡ ಕಾರ್ವಿುಕರಿಗೆ, ವಲಸೆ ಕಾರ್ವಿುಕರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. 2ನೇ ಹಂತದಲ್ಲಿ ಈ ಕಾರ್ವಿುಕರಿಗೆ ಅಗತ್ಯ ದಿನಸಿಯನ್ನು ವಿತರಿಸಬೇಕಾಗಿದೆ. ತಾಲೂಕುವಾರು ವಲಸಿಗರ, ಅಲೆಮಾರಿಗಳ, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಕಾರ್ವಿುಕರ ಪಟ್ಟಿ ಆಯಾ ತಹಸೀಲ್ದಾರ್​ಗಳ ಬಳಿಯಿದೆ. ಈ ಪಟ್ಟಿಯನ್ನು ಆಧರಿಸಿ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಟ್ಟಿಯಲ್ಲಿ ಇಲ್ಲದ ದಿನಸಿ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ವರದಿ ನೀಡುವಂತೆ ಬಿಇಒಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts