More

    ತೈಲ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

    ರಾಣೆಬೆನ್ನೂರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಹಾವೇರಿ ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
    ವಿವಿಧೆಡೆ ಸೈಕಲ್ ಜಾಥಾ ನಡೆಸಿದ ಪಕ್ಷದ ನಾಯಕರು, ಹಿರಿಯರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಕಾಂಗ್ರೆಸ್ ತಾಲೂಕು ಘಟಕದ ಕಾರ್ಯಕರ್ತರು ರಾಣೆಬೆನ್ನೂರಿನ ಕೆಇಬಿ ಗಣೇಶ ದೇವಸ್ಥಾನದಿಂದ ಪಿ.ಬಿ. ರಸ್ತೆಯ, ಎಂ.ಜಿ. ರಸ್ತೆ, ಪೋಸ್ಟ್ ವೃತ್ತ ಮೂಲಕ ತಹಸೀಲ್ದಾರ್ ಕಚೇರಿ ವರೆಗೆ ಸೈಕಲ್ ಜಾಥಾ ನಡೆಸಿದರು.
    ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಹೆಚ್ಚಾಗಿದ್ದರಿಂದ ದೇಶದಲ್ಲಿ ಅನಿವಾರ್ಯವಾಗಿ ಇಂಧನ ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಕುಂಟು ನೆಪ ಹೇಳುತ್ತಿದೆ. ಇವರಿಗೆ ಬಡವರ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಕೋವಿಡ್ ಸಂಕಷ್ಟದಿಂದ ಹೈರಾಣಾಗಿರುವ ಜನರಿಗೆ ಬೆಲೆ ಏರಿಕೆ ಅನಗತ್ಯ ಹೊರೆಯಾಗಿದೆ ಎಂದು ದೂರಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಶೇರುಖಾನ ಕಾಬೂಲಿ, ಮಂಜನಗೌಡ ಪಾಟೀಲ, ಡಾ. ಆರ್.ಎಂ. ಕುಬೇರಪ್ಪ, ನಿಂಗರಾಜ ಕೋಡಿಹಳ್ಳಿ, ಶೇಖಪ್ಪ ಹೊಸಗೌಡ್ರ, ಬಸನಗೌಡ ಮರದ, ಅಶೋಕ ಗಂಗನಗೌಡ್ರ, ಬಸವರಾಜ ಹುಚ್ಚಗೊಂಡರ, ಕೃಷ್ಣಪ್ಪ ಕಂಬಳಿ, ರವೀಂದ್ರಗೌಡ ಪಾಟೀಲ, ಬಸವರಾಜ ಸವಣೂರ, ರಾಮಣ್ಣ ಲಮಾಣಿ, ಏಕಾಂತ ಮುದಿಗೌಡ್ರ, ಅಶೋಕ ಸೊಂಟೇರ, ಸುರೇಶ ಜಾಡಮಲಿ, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲ
    ಶಿಗ್ಗಾಂವಿ(ಗ್ರಾ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆ. ಇದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ ಹೇಳಿದರು.
    ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಪಟ್ಟಣದಲ್ಲಿ ಸೈಕಲ್ ಜಾಥಾ ನಡೆಸಿ ಬಳಿಕ ಅವರು ಮಾತನಾಡಿದರು.
    ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಜನರಿಗೆ ಮನದಟ್ಟ ಮಾಡಲು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
    ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು. ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ, ಪ್ರೇಮಾ ಪಾಟೀಲ, ಸಂಜೀವಕುಮಾರ ನೀರಲಗಿ, ನಿಂಗಪ್ಪ ವೆಂಕೋಜಿ, ರಾಜೇಶ ಕಮ್ಮಾರ, ಡಾ. ಫಕೀರಗೌಡ್ರ ಪಾಟೀಲ, ಹನುಮಂತ ಬಂಡಿವಡ್ಡರ, ಮಂಜುನಾಥ ಮಣ್ಣನ್ನವರ, ಸುಧೀರ ಲಮಾಣಿ, ಶಿವಾನಂದ ಬಾಗೂರ, ಶ್ರೀಕಾಂತ ಪೂಜಾರ, ಗುರುನಗೌಡ ಪಾಟೀಲ, ಮಂಜುನಾಥ ತಿಮ್ಮಾಪೂರ ಇತರರು ಉಪಸ್ಥಿತರಿದ್ದರು.
    ಕರೊನಾಗಿಂತ ಸರ್ಕಾರ ಅಪಾಯಕಾರಿ
    ಸವಣೂರ: ತೈಲ ಬೆಲೆ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಸಿ.ಎಸ್.ಭಂಗಿ ಅವರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.
    ಕಾಂಗ್ರೆಸ್ ಸಮಿತಿ ರಾಜ್ಯ ಮಹಿಳಾ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ ಮಾತನಾಡಿ, ಕೋವಿಡ್ ಸೋಂಕಿಗಿಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಂಬ ಅಪಾಯಕಾರಿಯಾಗಿವೆ ಎಂದರು.
    ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಶ್ರೀಕಾಂತ ದುಂಡಿಗೌಡ್ರ, ಶ್ರೀಧರ ದೊಡ್ಡಮನಿ, ಗುಡ್ಡಪ್ಪ ಜಲದಿ, ಹನುಮರೆಡ್ಡಿ ನಡುವಿನಮನಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ, ಜಿ.ಪಂ. ಸದಸ್ಯ ರಮೇಶ ದುಗ್ಗತ್ತಿ, ಶಿವರಾಜ ಅಮರಾಪುರ, ಶಿವಕುಮಾರ ಅಡವಿಸ್ವಾಮಿಮಠ, ಶಬಾಜ್​ಖಾನ್ ಕುಲಕರ್ಣಿ, ರಫೀಕ್​ಖಾನ್ ಖಾದಿ, ಶಿವಾನಂದ ಅರಳಿಕಟ್ಟಿ, ಪೀರ್ ಅಹ್ಮದ್ ಗವಾರಿ, ನನ್ನೆಮಿಯಾ ಕಿಸ್ಮತಗಾರ, ಉಮೇಶ ಕಲ್ಮಠ, ಅಶೋಕ ಮನ್ನಂಗಿ, ವಸಂತಾ ಬಾಗೂರ, ನವೀನ್ ಬಂಡಿವಡ್ಡರ, ರಬ್ಬಾನಿ ತರೀನ್, ಮುಜಾಹಿದ್ ದಿವಾನಸಾಬನವರ, ಈರಯ್ಯಾ ಕಲ್ಮಠ ಇತರರಿದ್ದರು.
    ಜನಸಾಮಾನ್ಯರ ಜೀವನ ದುಸ್ತರ
    ಹಾನಗಲ್ಲ: ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದರು.
    ಪಟ್ಟಣದ ತಾಪಂ ಆವರಣದಿಂದ ಕಾಂಗ್ರೆಸ್ ಕಚೇರಿವರೆಗೆ ಸೈಕಲ್ ಜಾಥಾ ನಡೆಸಿ ಬಳಿಕ ಅವರು ಮಾತನಾಡಿದರು. ಜಾಗತಿಕ ಮಟ್ಟದ ಕಾರಣಗಳನ್ನು ನೀಡಿ ಕೈಚೆಲ್ಲಿ ಕುಳಿತಿರುವ ಕೇಂದ್ರ ಸರ್ಕಾರ ಬೆಲೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು ಎಂದರು. ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ವೀರಕುಮಾರ ಪಾಟೀಲ, ಜಗತ್ತಿಗೇ ಬುದ್ದಿ ಹೇಳುವ ಪ್ರಧಾನಿ ಮೋದಿ, ದೇಶದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬೆಲೆ ನಿಯಂತ್ರಿಸಲು ತೆರಿಗೆ ಕಡಿತಗೊಳಿಸುವ ಚಿಂತನೆ ನಡೆಸುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿ ಬಿಕ್ಕಟ್ಟಿನಲ್ಲಿದ್ದರೂ ಪ್ರವಾಸ, ಮಂತ್ರಿ ಮಂಡಲ ವಿಸ್ತರಣೆ ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ ಎಂದು ಆಪಾದಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಎಸ್. ಪಾಟೀಲ, ಪುಟ್ಟಪ್ಪ ನರೇಗಲ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಭದ್ರಾವತಿ, ಶಿವು ತಳವಾರ, ಪುರಸಭೆ ಅಧ್ಯಕ್ಷ ಖುರ್ಷಿದ್​ಅಹ್ಮದ್ ಹುಲ್ಲತ್ತಿ, ಉಪಾಧ್ಯಕ್ಷ ಮಹೇಶ ಪವಾಡಿ, ಮುಖಂಡರಾದ ಯಾಸೀರ್​ಖಾನ್ ಪಠಾಣ, ದಾನಪ್ಪ ಗಂಟೇರ, ರಾಮಣ್ಣ ಶೇಷಗಿರಿ, ಭೀಮಣ್ಣ ಲಮಾಣಿ, ಮಹದೇವಪ್ಪ ಬಾಗಸರ, ಚಂದ್ರಪ್ಪ ಜಾಲಗಾರ, ಉಮೇಶ ಗೌಳಿ, ಯಲ್ಲಪ್ಪ ಕಿತ್ತೂರ, ವೀರೇಶ ಬೈಲವಾಳ, ಸಂತೋಷ ಸುಣಗಾರ, ರಾಜೇಂದ್ರ ರ್ಬಾ, ಮಲ್ಲಿಕಾರ್ಜುನ ದೇವಣ್ಣನವರ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts