More

    ತೇವಾಂಶ ಪರಿಶೀಲಿಸಿ ಬಿತ್ತನೆ ಮಾಡಿ

    ಹುಕ್ಕೇರಿ: ಮುಂಗಾರು ಮಳೆ ಮತ್ತು ಭೂಮಿಯ ತೇವಾಂಶ ಪರಿಶೀಲಿಸಿ ರೈತರು ಬಿತ್ತನೆ ಮಾಡಬೇಕು ಎಂದು ತಾಲೂಕಿನ ಬೆಳವಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ನಾಯಿಕ ಹೇಳಿದರು.

    ಬೆಳವಿ ಪಿಕೆಪಿಎಸ್ ಕಾರ್ಯಾಲಯದ ಆವರಣದಲ್ಲಿ ಪಿಕೆಪಿಎಸ್‌ನಿಂದ ರೈತರಿಗೆ ಶುಕ್ರವಾರ ಮುಂಗಾರು ಬೆಳೆ ಸೋಯಾಬಿನ್ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಸಹಕಾರಿಯಲ್ಲಿ 45 ಟನ್ ಬೀಜಗಳ ದಾಸ್ತಾನಿದ್ದು ಬೆಳವಿ, ಹುಲ್ಲೋಳಿ, ಹುಲ್ಲೋಳಿ ಹಟ್ಟಿ, ಶೇಲಾಪುರ ಮತ್ತು ಯಾದಗೂಡ ಗ್ರಾಮದ ರೈತರಿಗೆ ವಿತರಿಸಲಾಗುತ್ತದೆ. ಮಳೆಯಾದ ತಕ್ಷಣ ಬಿತ್ತನೆ ಪ್ರಾರಂಭಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಮುಂಗಡವಾಗಿ ವಿತರಣೆ ಮಾಡಲಾಗುತ್ತಿದೆ ಎಂದರು.

    ಸೋಯಾಬೀನ್ ಬೀಜದ ಜತೆಗೆ ಗೋವಿನ ಜೋಳ, ಜೋಳದ ಬೀಜಗಳನ್ನು ಸಹ ವಿತರಿಸಲಾಗುತ್ತದೆ. ರೈತರಿಗೆ ಬೇಕಾದ ಎಲ್ಲ ರಸಾಯನಿಕ ಗೊಬ್ಬರಗಳನ್ನು ಸಹ ಸಹಕಾರಿ ಸಂಘದಿಂದ ಮಾರಾಟ ಮಾಡಲಾಗುತ್ತಿದೆ. ರೈತರು ತಾಲೂಕು ಕೇಂದ್ರಗಳಿಗೆ ತೆರಳಿ ಖರೀದಿಸುವ ತೊಂದರೆಯಾಗದಂತೆ ಸಚಿವ ಉಮೇಶ ಕತ್ತಿ ಅವರು ಕಳೆದ ಎರಡು ವರ್ಷಗಳಿಂದ ಈ ವ್ಯವಸ್ಥೆಯನ್ನು ಪಿಕೆಪಿಎಸ್ ಮತ್ತು ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಂಡಿದ್ದಾರೆ ಎಂದರು.

    ಬೆಳವಿ ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವ ನಾಯಿಕ, ವಕೀಲ ಲಿಂಗರಾಜ ನಾಯಿಕ, ಶಂಕರ ಬಾಗೇವಾಡಿ, ಗಿರೆಪ್ಪ ಕುರಣಗಿ, ಸತ್ತೆಪ್ಪ ಸಣ್ಣಕೆಂಚಪ್ಪಗೋಳ, ಶ್ಯಾಮಣ್ಣ ಅವರಸಿಂಗಿ, ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಬಸಗೌಡ ಮಗದುಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts