More

    ತೂಕ ಇಳಿಸುವ ಕಸರತ್ತಿನಲ್ಲಿ ಕೋತಿರಾಜ್

    ಶಿರಸಿ: ವಿಶ್ವದ ಅತಿ ಎತ್ತರದ ಏಂಜಲ್ ಜಲಪಾತವನ್ನು ಏರಲು ಸಂಕಲ್ಪಿಸಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಅದರ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದು, ಶಿರಸಿಯ ವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರ ನಿಸರ್ಗ ಮನೆಯಲ್ಲಿ ದೇಹತೂಕ ಇಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

    ಎರಡು ವರ್ಷಗಳ ಹಿಂದೆ ಜೋಗದಲ್ಲಿ ಜೀವರಕ್ಷಕ ಕಾರ್ಯಾಚರಣೆಯಲ್ಲಿರುವಾಗ ಬಿದ್ದು, ಗಂಭೀರ ಸಮಸ್ಯೆಗಳನ್ನೆದುರಿಸಿ, ದೀರ್ಘಕಾಲಿಕ ವಿಶ್ರಾಂತಿಯ ನಂತರ 120 ಕೆ.ಜಿ. ಭಾರವಾಗಿದ್ದ ಜ್ಯೋತಿರಾಜ್ ಅವರು ಸಾಧನೆಗೆ ತೊಡಕಾದ ಈ ಭಾರವನ್ನು ವೇಗವಾಗಿ ಓಡುವುದರ ಮೂಲಕ ಕಡಿಮೆ ಮಾಡಿಕೊಳ್ಳುತ್ತ 86 ಕೆ.ಜಿ.ಗೆ ಇಳಿಸಿದ್ದರು.

    ಆದರೆ ಈ ತೂಕದೊಂದಿಗೆ ಏಂಜಲ್ ಜಲಪಾತ ಏರಲು ಕಷ್ಟಸಾಧ್ಯವಾಗುವ ಕಾರಣ ಅದನ್ನು 65 ಕೆ.ಜಿ.ಗೆ ಇಳಿಸಿಕೊಳ್ಳಲು ಶಿರಸಿಯ ನಿಸರ್ಗ ಮನೆಗೆ ಆಗಮಿಸಿದ್ದಾರೆ. ಈ ಸವಾಲನ್ನು ಸೇವಾಭಾವದಿಂದ ಸ್ವೀಕರಿಸಿದ ನಿಸರ್ಗ ಮನೆಯ ವೈದ್ಯರು, ಸಿಬ್ಬಂದಿ, ಡಾ. ಪ್ರವೀಣ ಜಾಕೋಬ್ ಅವರ ಮಾರ್ಗದರ್ಶನದಲ್ಲಿ ಕಳೆದ 40 ದಿನಗಳಲ್ಲಿ 73 ಕೆ.ಜಿ.ಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲದಿನ ದೇಹಭಾರ ಇಳಿಸುವ ಪ್ರಯತ್ನ ನಡೆಯಲಿದೆ. ನಿತ್ಯವೂ ತನ್ನ ಕಠಿಣ ಪರಿಶ್ರಮವನ್ನು ಕರಾರುವಾಕ್ಕಾಗಿ ಮುಂದುವರೆಸಿರುವ ಕೋತಿರಾಜ್ ಅವರು ಕನಸಿನ ಸಾಧನೆಯನ್ನು ಮಾಡುವ ಆತ್ಮವಿಶ್ವಾಸ ಹೊಂದಿದ್ದಾಗಿ ನಿಸರ್ಗ ಮನೆಯ ಡಾ.ವೆಂಕಟರಮಣ ಹೆಗಡೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts