More

    ತುಳಸಿವಿವಾಹ ಯಕ್ಷಗಾನ ಕೃತಿ ಲೋಕಾರ್ಪಣೆ

    ಶಿರಸಿ: ಸಾತ್ವಿಕ ಹಬ್ಬಗಳ ಆಚರಣೆಯಿಂದ ಮನಸ್ಸು ಉಲ್ಲಾಸದಿಂದ ಇರಲು ಸಾಧ್ಯ ಎಂದು ಸ್ವರ್ಣವಲ್ಲೀ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಹವ್ಯಕರ ಹಬ್ಬದ ಹಾಡುಗಳ ಪುಸ್ತಕ, ಸಿ.ಡಿ. ಮತ್ತು ತುಳಸಿ ವಿವಾಹ ಎನ್ನುವ ಯಕ್ಷಗಾನ ಪ್ರಸಂಗ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವದಿಸಿದರು.
    ಅಂತಾರಾಷ್ಟೀಯ ಮಟ್ಟದಲ್ಲಿ ಜನರು ಸಂತೋಷದಿಂದ ಇರುವ ದೇಶದಲ್ಲಿ ಭಾರತದ ಜನರು ಕೂಡ ಒಂದಾಗಿದ್ದಾರೆ. ಇದಕ್ಕೆ ಕಾರಣ ನಮ್ಮ ದೇಶದ ಕುಟುಂಬ ವ್ಯವಸ್ಥೆ, ಸಂಸ್ಕೃತಿ, ಪದ್ಧತಿ ಆಚಾರ ವಿಚಾರಗಳಾಗಿವೆ ಎಂದರು. ತುಳಸಿ ಮಹತ್ವ ಸಾರುವಂತಹ ಕತೆ ದೇವಿಭಾಗವತದಲ್ಲಿ ಉಲ್ಲೇಖವಿದೆ. ತುಳಸಿ ಒಂದು ಆಯುರ್ವೆದ ಔಷಧವೂ ಹೌದು.ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಯುವದರಿಂದ ವಾತಾವರಣ ಶುದ್ಧವಾಗುತ್ತವೆ ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆ ಸಿಗುತ್ತದೆ. ತುಳಸಿಯನ್ನು ಸಾಲಿಗ್ರಾಮಕ್ಕೆ ಏರಿಸುತ್ತಾರೆ. ಪುರಾಣದಲ್ಲಿ ತುಳಸಿ ವಿವಾಹ ಎನ್ನುವ ಯಕ್ಷಗಾನ ಪ್ರಸಂಗ ಪುಸ್ತಕವನ್ನು ಸ್ವಂತಃ ಕಲಾವಿದೆಯಾದ ನಿರ್ಮಲಾ ಹೆಗಡೆ ಗೋಳಿಕೊಪ್ಪ ಅವರು ಕೃತಿ ರಚಿಸಿರುವುದು ಸುಂದರವಾಗಿ ಮೂಡಿಬಂದಿದೆ. ಇನ್ನೂ ದೊಡ್ಡ ಕೃತಿಯನ್ನು ರಚಿಸುವಂತಾಗಲಿ ಎಂದು ಹಾರೈಸಿದರು.
    ಪ್ರಮುಖರಾದ ಸುಮಾ ಹೆಗಡೆ, ವಾಣಿ ಹೆಗಡೆ, ಮಧುರಾ ಹೆಗಡೆ ಇವರು ಉಪಸ್ಥಿತರಿದ್ದರು. ಮಂಜುನಾಥ ಹೆಗಡೆ ಹಾಗೂ ಗಂಗಾ ಹೆಗಡೆ ಕುಟುಂಬದವರು ಉಪಸ್ಥಿತರಿದ್ದರು. ಸತೀಶ ಹೆಗಡೆ ಗೋಳಿಕೊಪ್ಪ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts