More

    ತುರ್ತು ಸಂಪರ್ಕಕ್ಕೆ ಪರದಾಟ

    ಶ್ರೀಧರ ಅಣಲಗಾರ ಯಲ್ಲಾಪುರ

    ಮಳೆ-ಗಾಳಿಯ ಅಬ್ಬರಕ್ಕೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಉಂಟಾಗಿದ್ದ ವಿದ್ಯುತ್ ವ್ಯತ್ಯಯ ಹಂತ ಹಂತವಾಗಿ ಸರಿಯಾಗುತ್ತಿದೆ. ಆದರೆ, ಮೊಬೈಲ್ ನೆಟ್​ವರ್ಕ್ ಹಾಗೂ ಸ್ಥಿರ ದೂರವಾಣಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಜನತೆ ತುರ್ತು ಸಂಪರ್ಕಕ್ಕೆ ಸಾಧನಗಳಿಲ್ಲದೇ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಇದನ್ನು ಸರಿಪಡಿಸಬೇಕಾಗಿದ್ದ ಬಿಎಸ್​ಎನ್​ಎಲ್ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲವೇನೋ ಎಂಬಂತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

    ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್​ಎನ್​ಎಲ್​ನ ಮೊಬೈಲ್ ಟವರ್​ಗಳು ಇದ್ದು, ಸ್ಥಿರ ದೂರವಾಣಿ ಕೆಟ್ಟು ಮೂಲೆ ಸೇರಿದ ಮೇಲೆ ಜನತೆ ಸಂಪರ್ಕಕ್ಕಾಗಿ ಮೊಬೈಲ್ ನೆಟ್​ವರ್ಕ್ ನೆಚ್ಚಿಕೊಂಡಿದ್ದರು. ಆದರೆ, ವರ್ಷದಿಂದೀಚೆಗೆ ವಿದ್ಯುತ್ ಸಂಪರ್ಕ ಇದ್ದರೆ ಮಾತ್ರ ಟವರ್ ಕಾರ್ಯನಿರ್ವಹಿಸುತ್ತಿತ್ತು. ವಿದ್ಯುತ್ ವ್ಯತ್ಯಯವಾದರೆ ನೆಟ್​ವರ್ಕ್ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಈ ಅವ್ಯವಸ್ಥೆ ಸರಿಪಡಿಸುವಂತೆ ಜನರು ಎಷ್ಟೇ ಹೇಳಿದರೂ ಅಧಿಕಾರಿಗಳ ಸ್ಪಂದನೆ ಮಾತ್ರ ಶೂನ್ಯ.

    ಈ ಕುರಿತು ಮಾಹಿತಿಗಾಗಿ ಬಿಎಸ್​ಎನ್​ಎಲ್ ಕಚೇರಿಗೆ ಹೋದರೂ ಸರಿಯಾಗಿ ಸ್ಪಂದಿಸುವುದಿಲ್ಲ. ಅವ್ಯವಸ್ಥೆ ಬಗೆಗೆ ಕೇಳಿದರೆ ಸರಿ ಮಾಡುತ್ತೇವೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಅದಕ್ಕೂ ಹೆಚ್ಚು ವಿಚಾರಿಸಲು ಹೋದರೆ ‘ಮೇಲಧಿಕಾರಿಗಳ ಬಳಿ ಮಾತನಾಡಿ’ ಎಂದು ದೂರವಾಣಿ ಸಂಖ್ಯೆ ನೀಡುತ್ತಾರೆ. ಮೇಲಧಿಕಾರಿಗಳನ್ನು ಸಂರ್ಪಸಿದರೆ ಇಲ್ಲಿನ ಪರಿಸ್ಥಿತಿ ಅವರಿಗೆ ತಿಳಿದಿರುವುದೇ ಇಲ್ಲ. ಅವರೂ ಹೇಳುವುದು ‘ಸ್ಥಳೀಯ ಅಧಿಕಾರಿಗಳನ್ನು ಸಂರ್ಪಸಿ’ ಎಂಬ ಮಾತನ್ನೇ!

    ಟವರ್ ನಿರ್ವಹಣೆ ಹೆಸ್ಕಾಂಗೆ!
    ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾದರೆ ತಕ್ಷಣ ನೆಟ್​ವರ್ಕ್ ಹೋಗಿಬಿಡುವುದರಿಂದ ‘ಬಹುಶಃ ಬಿಎಸ್​ಎನ್​ಎಲ್​ನವರು ಟವರ್​ಗಳ ನಿರ್ವಹಣೆಯನ್ನು ಹೆಸ್ಕಾಂಗೆ ವಹಿಸಿರಬೇಕು, ಅದಕ್ಕಾಗಿ ವಿದ್ಯುತ್ ವ್ಯತ್ಯಯವಾದ ತಕ್ಷಣ ನೆಟ್​ವರ್ಕ್ ಕೂಡ ಮಾಯವಾಗುತ್ತದೆ’ ಎಂಬ ತಮಾಷೆಯ ಮಾತು ಗ್ರಾಮೀಣ ಭಾಗದಲ್ಲಿ ಚಾಲ್ತಿಯಲ್ಲಿದೆ.

    ಯಾರಿಗಾದರೂ ಅನಾರೋಗ್ಯ ಉಂಟಾದರೆ, ಯಾರಾದರೂ ಸತ್ತರೆ ತುರ್ತು ದೂರವಾಣಿ ಕರೆಗಳನ್ನು ಮಾಡುವುದಕ್ಕೂ ಕಷ್ಟವಾಗುವ ಸ್ಥಿತಿ ನಿರ್ವಣವಾಗಿದೆ. ಬಿಎಸ್​ಎನ್​ಎಲ್ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳಾದರೂ ಎಚ್ಚೆತ್ತುಕೊಂಡು ವ್ಯವಸ್ಥೆ ಸರಿಪಡಿಸುವತ್ತ ಗಮನ ಹರಿಸಬೇಕು.
    | ಗಣೇಶ ಹೆಗಡೆ, ನಂದೊಳ್ಳಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts