More

    ತುತ್ತು ಅನ್ನಕ್ಕೂ ಕೂಲಿ ಕಾರ್ವಿುಕರ ಪರದಾಟ

    ರಾಣೆಬೆನ್ನೂರ: ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ನಿತ್ಯ ಕೂಲಿ ಆಶ್ರಯಿಸಿಕೊಂಡು ಜೀವನ ನಡೆಸುತ್ತಿದ್ದ ನಗರದ ಅಡವಿ ಆಂಜನೇಯ ಬಡಾವಣೆಯ ನೂರಾರು ನಿವಾಸಿಗಳು ಇದೀಗ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ.

    ಲಾಕ್​ಡೌನ್ ಘೊಷಿಸಿದ್ದರಿಂದ ಮಾಡಲು ಕೆಲಸವಿಲ್ಲ, ಜೀವನ ನಡೆಸಲು ಹಣವಿಲ್ಲ. ಹೀಗಾಗಿ ಈ ಗುಡಿಸಲು ವಾಸಿಗಳಿಗೆ ಹೊಟ್ಟೆಗೆ ಊಟವೂ ಇಲ್ಲದಂತಹ ಪರಿಸ್ಥಿತಿ ನಿರ್ವಣವಾಗಿದೆ.

    ಶಾಸಕರಿಂದ ದಿನಸಿ ವಿತರಣೆ: ಶಾಸಕ ಅರುಣಕುಮಾರ ಪೂಜಾರ ಮಂಗಳವಾರ ಅಡವಿ ಆಂಜನೇಯ ಬಡಾವಣೆಯ ಗುಡಿಸಲು ನಿವಾಸಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಅಕ್ಕಿ, ಬೇಳೆ, ಸಕ್ಕರೆ, ಟೀ ಪುಡಿ ಸೇರಿ ದಿನಸಿ ವಿತರಿಸಿದರು. ಜಿ.ಪಂ. ಸದಸ್ಯೆ ಮಂಗಳಗೌರಿ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಮಂಜುನಾಥ ಓಲೇಕಾರ, ವಿಶ್ವನಾಥ ಪಾಟೀಲ, ಇತರರು ಪಾಲ್ಗೊಂಡಿದ್ದರು.

    ಪೌರಕಾರ್ವಿುಕರ ಆರೋಗ್ಯ ತಪಾಸಣೆ: ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ನಗರಸಭೆ ಪೌರ ಕಾರ್ವಿುಕರಿಗೆ ಬೆಳಗ್ಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ. ಗಿರೀಶ ಕೆಂಚಪ್ಪನವರ 160 ಪೌರ ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಿ, ಉಚಿತವಾಗಿ ಔಷಧ ವಿತರಿಸಿದರು. ಆಯುಕ್ತ ಡಾ. ಎನ್. ಮಹಾಂತೇಶ, ಪರಿಸರ ಇಂಜಿನಿಯರ್ ಮಂಜುಳಾದೇವಿ ಮುಂಡಾಸದ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts