More

    ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸೆ ಜಾತ್ರೆ ಸಡಗರ: ಇಂದು ತೀರ್ಥಸ್ನಾನ, ನಾಳೆ ರಥೋತ್ಸವ

    ತೀರ್ಥಹಳ್ಳಿ: ಪುರಾಣ ಪ್ರಸಿದ್ಧವಾದ ಎಳ್ಳಮಾವಾಸೆ ಜಾತ್ರೆ ಶುಕ್ರವಾರದಿಂದ ಮೂರು ದಿನ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಇಡೀ ಪಟ್ಟಣ ವಿದ್ಯುತ್ ಅಲಂಕಾರದೊಂದಿಗೆ ಕಂಗೊಳಿಸುತ್ತಿದೆ.
    ಜಾತ್ರೆಯ ಅಂಗವಾಗಿ ಧಾರ್ಮಿಕ ಕೈಂಕರ್ಯಗಳು ಬುಧವಾರದಿಂದಲೇ ಆರಂಭಗೊಂಡಿವೆ. ಶುಕ್ರವಾರ ಮುಂಜಾನೆ ತುಂಗಾನದಿಯಲ್ಲಿರುವ ಪರಶುರಾಮ ಕೊಂಡದಲ್ಲ್ಲಿ ತೀರ್ಥಸ್ನಾನ ನಡೆಯಲಿದ್ದು, ಶನಿವಾರ ಶ್ರೀ ರಾಮೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಭಾನುವಾರ ಸಂಜೆ ಏಳು ಗಂಟೆಯಿಂದ ತುಂಗಾನದಿಯಲ್ಲಿ ಅದ್ಧೂರಿಯ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವ ನಡೆಯಲಿದೆ. ಇದರ ಅಂಗವಾಗಿ ಪಟ್ಟಣದ ತುಂಗಾ ಸೇತುವೆ, ತುಂಗಾ ನದಿಯ ಇಕ್ಕೆಲಗಳು, ರಾಮಮಂಟಪ ಹಾಗೂ ಸುತ್ತಲಿನ ಪರಿಸರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತಿದೆ. ತೆಪ್ಪೋತ್ಸವ ನಡೆಯುವ ವೇಳೆ ಸುಮಾರು ಆರು ಲಕ್ಷ ರೂ.ಗೆ ಅಧಿಕ ಮೊತ್ತದ ಆಕರ್ಷಕ ಸಿಡಿಮದ್ದು ಪ್ರದರ್ಶನ ಇರಲಿದೆ.
    ಅದೇ ದಿನ ಸಂಜೆ 6 ಗಂಟೆಯಿಂದ ನದಿ ದಡದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಗುರುವಾರದಿಂದ ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
    ಅನ್ನದಾಸೋಹ ಮಿತ್ರವೃಂದವು ಸಾರ್ವಜನಿಕರ ನೆರವಿನೊಂದಿಗೆ ಈ ಮೂರು ದಿನ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದೆ. ಮಕ್ಕಳ ಆಟಿಕೆ, ಗೃಹಬಳಕೆ ವಸ್ತುಗಳು, ಸಿಹಿ ತಿನಿಸು, ಬತ್ತಾಸು, ಮಂಡಕ್ಕಿ ಸೇರಿದಂತೆ ವಿವಿಧ ಅಂಗಡಿಗಳು ರಥಬೀದಿಯ ಇಕ್ಕೆಲ್ಲಗಳಲ್ಲಿ ಆರಂಭಗೊಂಡಿದ್ದು, ಜಾತ್ರೆಗೆ ಮೆರುಗು ನೀಡಿವೆ. ಪೊಲೀಸ್ ಇಲಾಖೆ ಮುಂಜಾಗ್ರತೆ ಕೈಗೊಂಡಿದ್ದು, ಸೂಕ್ತ ಬಿಗಿಬಂದೋ ಬಸ್ತ್ ಕಲ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts