More

    ತಾಳಿಕೋಟೆ ದೇಗುಲಗಳಲ್ಲಿ ರಾಮಲಲ್ಲಾ ಪೂಜೆ

    ತಾಳಿಕೋಟೆ: ಅಯ್ಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಜ.22 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣ ಸಂಪೂರ್ಣ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದು, ಹಿಂದಿನ ಗತವೈಭವ ಮರುಕಳಿಸುವಂತೆ ಭಾಸವಾಗುತ್ತಿದೆ.

    ಪಟ್ಟಣದ ಸಂಪರ್ಕ ರಸ್ತೆಗಳಿಂದ ಹಿಡಿದು ಪ್ರಮುಖ ಎಲ್ಲ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಪಟ್ಟಣವೆಲ್ಲ ಕೇಸರಿಮಯವಾಗಿದ್ದು, ಪ್ರತಿ ಕಂಬಗಳಲ್ಲಿ ಜೈ ಶ್ರೀರಾಮ ನಾಮಾಂಕಿತ ಅಂಟಿಸಲಾಗಿದೆ.

    ಪಟ್ಟಣದಲ್ಲಿ ಪ್ರಮುಖವಾಗಿ ಗುರುತಿದ 90ಕ್ಕೂ ಹೆಚ್ಚು ದೇವಸ್ಥಾನಗಳ ಸ್ವಚ್ಛತೆಯ ಜತೆಗೆ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ಖಾಸ್ಗತೇಶ್ವರಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ತಿಳಿಸಿದ್ದಾರೆ. ಇದರಿಂದ ಯುವಕರಿಗೆ ಸ್ವಚ್ಛತೆ ಮಾಡಲು ಉತ್ಸುಕರಾಗಿ ಬಹುತೇಕ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿದ್ದು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

    ವಿಶ್ವ ಹಿಂದು ಪರಿಷತ್ ಆಶಯದಂತೆ ಈಗಾಗಲೇ ಪಟ್ಟಣದ ಮುಖ್ಯಭಾಗದಲ್ಲಿರುವ ಶ್ರೀಹನುಮಾನ ಮಂದಿರ ಒಳಗೊಂಡು ಕೆಲವು ದೇವಸ್ಥಾನಗಳಲ್ಲಿ ಜ.14 ರಿಂದಲೇ ಶ್ರೀರಾಮ ನಾಮ ಜಪದ ಜತೆಗೆ ಪಾರಾಯಣ, ಮಂತ್ರಘೋಷ ಹಾಗೂ ಶ್ರೀರಾಮ ಸೋತ್ರಗಳನ್ನು ಪಠಿಸುತ್ತ ಬರಲಾಗಿದೆ.

    ಪಟ್ಟಣದಲ್ಲಿನ 11ನೇ ಶತಮಾನದ ಕಾಲದ್ದು ಎನ್ನಲಾಗುತ್ತಿರುವ ಡೋಣಿ ನದಿ ತೀರದ ಹತ್ತಿರವಿರುವ ಶ್ರೀರಾಮ ಮಂದಿರವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದ್ದು ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ದಿನದಂದು ವಿಶೇಷ ಪೂಜೆಗಳೊಂದಿಗೆ ಮಹಾ ಪ್ರಸಾದ ವಿತರಣೆ ನಡೆಯಲಿದೆ.

    ಪ್ರಮುಖ ಎಲ್ಲ ದೇವಸ್ಥಾನಗಳಲ್ಲಿ ಮಹಾ ಪ್ರಸಾದದ ವ್ಯವಸ್ಥೆ ಕೈಗೊಂಡಿದ್ದು ಪಟ್ಟಣದ ಪ್ರಮುಖ ಭಾಗದಲ್ಲಿರುವ ದೇವಸ್ಥಾನಗಳಲ್ಲಿ ಎಲ್‌ಇಡಿ (ಟಿವಿ)ಯ ಮೂಲಕ ಪ್ರಭು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ನೇರ ಪ್ರಸಾರದ ವ್ಯವಸ್ಥೆ ಮಾಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts