More

    ತಾಲೂಕು ಆಡಳಿತಕ್ಕೆ ಕ್ವಾರಂಟೈನ್ ಬೇನೆ

    ಹಳಿಯಾಳ: ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡುತ್ತಿದ್ದರು ಅದನ್ನು ಲೆಕ್ಕಿಸದೇ ಮಾರುಕಟ್ಟೆಗೆ ತೆರಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

    ಅಲ್ಲದೆ, ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯ ಪಾಲಕರೊಬ್ಬರು ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ ನೀಡಿರುವ ನಿರ್ದೇಶನಗಳನ್ನು ಪಾಲಿಸದೇ ಪಟ್ಟಣದಲ್ಲಿ ಅಲೆಯುತ್ತಿದ್ದು, ಹಲವು ಮನೆಗಳಿಗೆ ಭೇಟಿ ನೀಡುತ್ತಿದ್ದಾನೆ. ಇದನ್ನು ಕಂಡು ಆತಂಕಕ್ಕೊಳಗಾಗಿರುವ ನಿವಾಸಿಗಳು ತಾಲೂಕಾಡಳಿತದ ಗಮನಕ್ಕೆ ಈ ವಿಷಯ ತಂದಿದ್ದಾರೆ. ಶನಿವಾರ ಬೆಳಗ್ಗೆ ನೋಡಲ್ ಅಧಿಕಾರಿ ಹೆಸ್ಕಾಂ ಎಇ ರವೀಂದ್ರ ಮೆಟಗುಡ್ಡ ಕ್ವಾರಂಟೈನ್ ವ್ಯಕ್ತಿಯ ಮನೆಗೆ ತೆರಳಿ ಸೂಕ್ತ ನಿರ್ದೇಶನ ನೀಡಿ ಎಚ್ಚರಿಸಿ ಬಂದಿದ್ದಾರೆ.

    ಔಷಧ, ತರಕಾರಿ, ದಿನಸಿ ತರುವ ನೆಪದಲ್ಲಿ ಜನ ಮಾರುಕಟ್ಟೆಗೆ ಬರುತ್ತಿದ್ದರೆ, ಇಲ್ಲಿನ ಕೆಲ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಯಾವುದೇ ನಿರ್ಬಂಧವಿಲ್ಲದೇ ಪಟ್ಟಣದಲ್ಲಿ ಅಲೆಯುವುದನ್ನು ನಿಯಂತ್ರಿಸುವುದೇ ತಾಲೂಕಾಡಳಿತಕ್ಕೆ ತಲೆಬೇನೆಯಾಗಿ ಪರಿಣಮಿಸಿದೆ.

    ಮಾರ್ಕೆಟ್ ಬಂದ್: ಸಾರ್ವಜನಿಕರ ಅಲೆದಾಟಕ್ಕೆ ನಿಯಂತ್ರಣ ಹಾಕಲು ಮುಂದಾಗಿರುವ ಹಳಿಯಾಳ ಪುರಸಭೆಯು ಪಟ್ಟಣದಲ್ಲಿನ ತರಕಾರಿ, ಹಣ್ಣು ಹಂಪಲ ಹಾಗೂ ದಿನಸಿ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಭಾನುವಾರದಿಂದ ಪುರಸಭೆಯಿಂದಲೇ ವಾರ್ಡ್ ವಾರು ದಿನಸಿ ಪೂರೈಸುವ ಕಾರ್ಯವನ್ನು ಆರಂಭಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ತಿಳಿಸಿದ್ದಾರೆ.

    ಕ್ವಾರಂಟೈನ್ ಕುಟುಂಬದ ಸದಸ್ಯರು ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆಯ ನಿರ್ದೇಶನ ಪಾಲಿಸಬೇಕು. ಸಾರ್ವಜನಿಕವಾಗಿ ಅಲೆದಾಟ ಆರಂಭಿಸಿದ್ದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು.
    | ಡಾ. ರಮೇಶ ಕದಂ ತಾಲೂಕು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts