More

    ತಹಸಿಲ್ ಕಚೇರಿಯಲ್ಲಿ ಪೇಪರ್​ಗೆ ಬರ

    ವಿಜಯವಾಣಿ ವಿಶೇಷ ಯಾದಗಿರಿ

    ನಿಮಗೆ ಪಹಣಿ ಬೇಕೆ? ಹೊರಗಡೆ ಎ4 ಸೈಜ್ ಪೇಪರ್ ತನ್ನಿ. ಪ್ರಿಂಟ್ ಮಾಡಿ ಕೊಡುತ್ತೇವೆ. ಇಲ್ಲವಾದರೆ ನಮ್ಮಲ್ಲಿ ಪೇಪರ್ ಬರುವವರೆಗೂ ಕಾಯಿರಿ.

    ಹೌದು… ಇದು ನಗರದ ತಹಸಿಲ್ ಕಚೇರಿ ಆವರಣದಲ್ಲಿರುವ ಭೂಮಿ ಕೇಂದ್ರದ ಹೊರಗಡೆ ಹಾಕಿರುವ ಬೋಡರ್್. ಇದನ್ನು ಕಂಡು ದಂಗಾದ ರೈತಾಪಿ ವರ್ಗ ಮರು ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ಯಾದಗಿರಿ ತಹಸಿಲ್ ಕಚೇರಿ 50 ಪೈಸೆ ಕಿಮ್ಮತ್ತಿನ ಪೇಪರ್ ಖರೀದಿ ಮಾಡಲಾರದಷ್ಟು ದಿವಾಳಿ ಎದ್ದಿದೆಯೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ.

    ಸದಾ ಒಂದಿಲ್ಲೊಂದು ಎಡವಟ್ಟು ಮಾಡುತ್ತ ಸುದ್ದಿಯಲ್ಲಿರುವ ತಹಸಿಲ್ ಕಚೇರಿ ಸಿಬ್ಬಂದಿ ಇದೀಗ ಭೂಮಿ ಕೇಂದ್ರದ ಹೊರಗಡೆ ಪೇಪರ್ ಇಲ್ಲದ ಕಾರಣ ಪಹಣಿ ಪತ್ರಿಕೆ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಟಿಕ್ಕರ್ ಅಂಟಿಸಿ ಬಂದವರನ್ನು ವಾಪಸ್ ಕಳಿಸುತ್ತಿದ್ದಾರೆ. ಅಲ್ಲದೆ ಕೇಂದ್ರಕ್ಕೆ ಬೀಗ ಹಾಕಲಾಗಿದ್ದು, ಕಚೇರಿ ಕೆಲಸದ ನಿಮಿತ್ತ ದೂರದ ಊರುಗಳಿಂದ ಬಂದವರು ಈ ಸ್ಟಿಕ್ಕರ್ ನೋಡಿ ಹೌಹಾರುತ್ತಿದ್ದಾರೆ.

    ತನ್ನ ಚೇಂಬರ್ ಪಕ್ಕದಲ್ಲೇ ಈ ಬೋರ್ಡ್​ ಹಾಕಿದ್ದರೂ ತಹಸೀಲ್ದಾರ್ ಗಮನಕ್ಕೆ ಬರದಿರುವುದು ನಿಜಕ್ಕೂ ಸೋಜಿಗ ಎಂದು ಜನತೆ ಆಡಳಿತದ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಜಿಲ್ಲೆಯ ತಹಸಿಲ್ ಕಚೇರಿಗಳಲ್ಲಿ ದಲ್ಲಾಳಿಗಳ ದರ್ಬಾರ್ ಹೆಚ್ಚಿದ್ದು, ಸಕಾಲಕ್ಕೆ ಜನರ ಕೆಲಸಗಳು ಆಗುತ್ತಿಲ್ಲ ಎಂಬ ಅಪವಾದದ ಮಧ್ಯೆ ಇಂಥದ್ದೊಂದು ವೈರುಧ್ಯ ನಡೆದಿರುವುದು ವರ್ತಮಾನದ ದುರಂತ.

    ತಹಸಿಲ್ ಕಚೇರಿ ಸಾರ್ವಜನಿಕರ ಜೀವನಾಡಿ ಇದ್ದಂತೆ. ಬಹುಶಃ ಇಲ್ಲಿಗೆ ಭೇಟಿ ನೀಡುವಷ್ಟು ಜನ ಬೇರಾವುದೇ ಕಚೇರಿಗೆ ಎಡತಾಕುವುದಿಲ್ಲ. ಅದರಲ್ಲೂ ವಿಶೇಷವಾಗಿ ಭೂಮಿ ಕೇಂದ್ರ ಸದಾ ಜನರಿಂದ ತುಂಬಿರುತ್ತದೆ. ಸಾರ್ವಜನಿಕರು ಪಡೆಯುವ ಪ್ರತಿ ದಾಖಲೆಗೂ ಸಕರ್ಾರ ಇಂತಿಷ್ಟು ಶುಲ್ಕ ನಿಗದಿಪಡಿಸುತ್ತದೆ. ಆದರೆ ಆ ಹಣ ಎಲ್ಲಿಗೆ ಹೋಯ್ತು ಎಂಬ ಪ್ರಶ್ನೆಗೆ ತಹಸೀಲ್ದಾರರೇ ಉತ್ತರಿಸಬೇಕಿದೆ.

    ಪ್ರಮುಖ ಸೇವೆಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಕರ್ಾರ ಎರಡು ದಿನ ಹಿಂದೆಯಷ್ಟೇ ಗ್ರಾಮ ಒನ್ ಸೇವೆಗೆ ಚಾಲನೆ ನೀಡಿದೆ. ಆದರೆ ಯಾದಗಿರಿಯಲ್ಲಿ ಪಹಣಿ ಪಡೆಯಲು ಪೇಪರ್ಗೂ ಬರವಿರುವುದನ್ನು ಕಂಡರೆ ತಹಸಿಲ್ ಕಚೇರಿ ಆಡಳಿತಯಂತ್ರ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts