More

    ತರಬೇತಿ ಶಿಬಿರದಿಂದ ಕೋಕ್

    ರಾಮಚಂದ್ರ ಕಿಣಿ ಭಟ್ಕಳ

    ಈ ಬಾರಿಯ ಭಾರತ ಕಬಡ್ಡಿ ತಂಡದ ಜ್ಯೂನಿಯರ್ ವಿಭಾಗದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಕಬಡ್ಡಿ ಪಟುವಿಗೆ ತರಬೇತಿ ಶಿಬಿರಕ್ಕೆ ಪಾಲ್ಗೊಳ್ಳಲು ಅವಕಾಶ ನೀಡದೆ ತಡೆ ಒಡ್ಡಿರುವ ಘಟನೆ ನಡೆದಿದೆ.

    ತಾಲೂಕಿನ ಬೆಳಕೆ ನಿವಾಸಿ ವಿನೋದ ಲಚ್ಮಯ್ಯ ನಾಯ್ಕ ಅವರು ತರಬೇತಿ ಶಿಬಿರಕ್ಕೆ ತೆರಳುವ ಅವಕಾಶದಿಂದ ವಂಚಿತರಾದ ಕ್ರೀಡಾಪಟು. ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿನೋದ ಲಚ್ಮಯ್ಯ ನಾಯ್ಕ ಮೊದಲ ಹಂತದ 36 ಕ್ರೀಡಾಪಟುಗಳ ಯಾದಿಯಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟುವಾಗಿ 24ನೇ ಸ್ಥಾನ ಪಡೆದಿದ್ದರು. ನಂತರ ಆರಂಭಿಸಿದ ಮೊದಲ ಹಂತದ ಆನ್​ಲೈನ್ ತರಬೇತಿಯಲ್ಲಿ ಆಯ್ಕೆಯನ್ನು ತಡೆಹಿಡಿಯಲಾಗಿದೆ.

    ಜ್ಯೂನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಅಮೋಘ ಪ್ರದರ್ಶನದಿಂದ ವಿನೋದ ನಾಯ್ಕ ಭಾರತ ಕಬಡ್ಡಿ ತಂಡದ 36 ಸದಸ್ಯರಲ್ಲಿ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ದೇಶದ ಇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಕರ್ನಾಟಕ ತಂಡದ ಕ್ರೀಡಾಪಟುವಿನ ಆಯ್ಕೆ ತಡೆಹಿಡಿದು ಈ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಿರುವುದು ಕಬಡ್ಡಿ ಪ್ರೀಯರ ಅಸಮಾಧಾನಕ್ಕೆ ಕಾರಣವಾಗಿದೆ.

    ಈ ಹಿಂದೆಯೆ ನಡೆಯಬೇಕಿದ್ದ ಶಿಬಿರ: ಹರಿಯಾಣದಲ್ಲಿ ಫೆ. 13ರಂದು ಆಯ್ಕೆಗಾಗಿ ಪಂದ್ಯಾಟ ನಡೆದಿತ್ತು. ಅಲ್ಲಿ ಕರ್ನಾಟಕದಿಂದ ಜ್ಯೂನಿಯರ್ ವಿಭಾಗದಲ್ಲಿ ವಿನೋದ ನಾಯ್ಕ ಆಯ್ಕೆಯಾಗಿದ್ದರು. ಕರೊನಾ ಕಾರಣದಿಂದ ಅಂದು ನಡೆಯಬೇಕಿದ್ದ ತರಬೇತಿ ಶಿಬಿರವನ್ನು ಮುಂದೂಡಲಾಗಿತ್ತು. ತರಬೇತಿಗೆ ಪಾಲ್ಗೊಳ್ಳಲು ದಿಲ್ಲಿಯಲ್ಲಿರುವ ಕಬಡ್ಡಿ ಅಸೋಶಿಯೇಷನ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿನೋದ ಹೆಸರು ಕೈಬಿಡಲಾಗಿತ್ತು. ಈ ಕುರಿತು ಕೇಳಿದಾಗ ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎನ್ನುವ ಮಾಹಿತಿ ದೊರಕಿದೆ. ಸೀನಿಯರ್ ವಿಭಾಗದಲ್ಲೂ ಕರ್ನಾಟಕದ ಏಕೈಕ ಆಟಗಾರ ಐವರ್ನಾಡು ಗ್ರಾಮದ ಸಚಿನ್ ಪ್ರತಾಪ ಅವರ ಆಯ್ಕೆ ತಡೆಹಿಡಿಯಲಾಗಿದ್ದು, ಇಲ್ಲೂ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶದಿಂದ ವಂಚಿಸಲಾಗಿದೆ.

    ಕರ್ನಾಟಕದ ಏಕೈಕ ಆಟಗಾರ ವಿನೋದ ಲಚ್ಮಯ್ಯ ನಾಯ್ಕ ತರಬೇತಿ ಶಿಬಿರಕ್ಕೆ ತೆರಳುವ ಅವಕಾಶ ವಂಚಿತರಾಗಿದ್ದ ವಿಷಯ ಗಮನಕ್ಕೆ ಬಂದಿದೆ. ಈ ಕುರಿತು ರಾಜ್ಯ ಕ್ರೀಡಾ ಮಂತ್ರಿ ಸಿ.ಟಿ. ರವಿ ಅವರನ್ನು ಸಂರ್ಪಸಿ ಕರ್ನಾಟಕದ ಸೀನಿಯರ್, ಜ್ಯೂನಿಯರ್ ವಿಭಾಗದ ಆಟಗಾರರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಲಾಗಿದೆ.
    | ಸುನೀಲ ನಾಯ್ಕ ಶಾಸಕ, ಭಟ್ಕಳ ವಿಧಾನಸಭೆ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts