More

    ತರಕಾರಿ, ದಿನಸಿ ಖರೀದಿಗೆ ಚೌಕಾಕಾರದ ಗುರುತು


    ಸೇಡಂ: ಮಹಾಮಾರಿ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಅಂತೆಯೇ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಸ್ವಾಮಿಗಳಿಂದ ಜಾಗೃತಿ ಹಾಗೂ ತರಕಾರಿ, ಕಿರಾಣಿ ಅಂಗಡಿಗಳ ಮುಂದೆ ಚೌಕಾಕಾರದ ಗುರುತು ಹಾಕಿಸುವ ಮೂಲಕ ಅರಿವು ಮೂಡಿಸುತ್ತಿದೆ.
    ಪಿಎಸ್ಐ ಸುಶೀಲಕುಮಾರ ಅವರು ಪ್ರತಿ ತರಕಾರಿ, ಕಿರಾಣಿ, ಹಣ್ಣು ಸೇರಿ ಅಗತ್ಯ ವಸ್ತುಗಳ ಅಂಗಡಿಗಳ ಮುಂದೆ ಚೌಕಾಕಾರದ ಗುರುತು ಹಾಕಿ ಸರದಿ ಮೇಲೆ ಖರೀದಿಗೆ ಮುಂದಾಗುವಂತೆ ಮಾಡಿದ್ದಾರೆ. ಅಲ್ಲದೆ ಸ್ವಯಂ ಸೇವೆ ಸಲ್ಲಿಸಲು ಮುಂದೆ ಬಂದ ಯುವಕರನ್ನು ಆಯಾ ಅಂಗಡಿಗಳ ಮುಂದೆ ನಿಲ್ಲಿಸಿ ಸರದಿ ನಿಯಮ ಉಲ್ಲಂಘಿಸಿದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೀಗೆ ಮುಂದುವರಿದರೆ ಭಾರತ ಬಹುಬೇಗ ಕರೊನಾದಿಂದ ಹೊರ ಬರಬಹುದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿ ಸಿಪಿಐ ರಾಜಶೇಖರ ಹಳಗೋಧಿ, ಪಿಎಸ್ಐ ಸುಶೀಲಕುಮಾರ ಅವರ ಮನವಿ ಮೇರೆಗೆ ಕೊತ್ತಲ ಬಸವೇಶ್ವರ ಸಂಸ್ಥಾನದ ಶ್ರೀ ಸದಾಶಿವ ಸ್ವಾಮಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ತೆರಳಿ ಧ್ವನಿವರ್ಧಕದ ಮೂಲಕ ಕರೊನಾ ಕುರಿತು ಜಾಗೃತಿ ಮೂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts