More

    ತಂಬಾಕು ಬೆಳೆಗಾರರಿಗೆ ರಸಗೊಬ್ಬರ ವಿತರಣೆ

    ಕಟ್ಟೆಮಳಲವಾಡಿ: ಹುಣಸೂರು ತಾಲೂಕಿನ ಕಟ್ಟೆಮಳವಾಡಿ ತಂಬಾಕು ಮಂಡಳಿಯಲ್ಲಿ ಸೋಮವಾರ ತಂಬಾಕು ಬೆಳೆಗಾರರಿಗೆ ರಸಗೊಬ್ಬರ ವಿತರಿಸಲಾಯಿತು.
    ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಶಂಭುಲಿಂಗೇಗೌಡ ಮಾತನಾಡಿ, ರಾಜ್ಯದಲ್ಲಿ ಈ ವರ್ಷ 25, 498 ಜನ ರೈತರು ರಸಗೊಬ್ಬರ ಪಡೆಯಲು ನೋಂದಣಿ ಮಾಡಿಸಿದ್ದು, ಸುಮಾರು 21 ಸಾವಿರ ಟನ್ ರಸಗೊಬ್ಬರ ಬೇಕಾಗಿದೆ. ಎಲ್ಲವೂ ಗೋದಾಮಿನಲ್ಲಿ ದಾಸ್ತಾನಾಗಿದ್ದು, ಸಿಂಗಲ್ ಬ್ಯಾರನ್‌ಗೆ 6 ಬ್ಯಾಗ್ ಎಸ್‌ಒಪಿ, 2 ಬ್ಯಾಗ್ ಡಿಎಪಿ, 4 ಬ್ಯಾಗ್ ಅಮೋನಿಯಂ ಸಲ್ಫೇಟ್, 3 ಬ್ಯಾಗ್ ಕ್ಯಾಲ್ಸಿಯಂ ಮೆಟ್ರೀಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
    ರಸಗೊಬ್ಬರ ಕಮಿಟಿ ಅಧ್ಯಕ್ಷ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಸಕಾಲಕ್ಕೆ ತಂಬಾಕು ಮಂಡಳಿಯಿಂದ ಗೊಬ್ಬರ ನೀಡದಿದ್ದರೆ ಅಂಗಡಿಗಳಲ್ಲಿ ದುಬಾರಿ ಹಣ ಕೊಟ್ಟು ಖರೀದಿಸುತ್ತಿದ್ದರು. ಅದನ್ನು ಮನಗಂಡು ಅಧಿಕಾರಿಗಳು ಹಾಗೂ ಗೊಬ್ಬರದ ಸಮಿತಿಯಿಂದ ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ಸಿಂಗಲ್ ಬ್ಯಾರನ್‌ಗೆ 31 ಸಾವಿರ ರೂ. ನಿಗದಿ ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 6 ಸಾವಿರ ರೂ.ಕಡಿಮೆಯಾಗಿದೆ. ಇದೇ ಗೊಬ್ಬರಗಳನ್ನು ಖಾಸಗಿ ಅಂಗಡಿಗಳಲ್ಲಿ ಖರೀದಿಸಿದರೆ 8000 ರೂ.ಹೆಚ್ಚುವರಿ ನೀಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

    ಹರಾಜು ಅಧೀಕ್ಷಕರಾದ ಧನರಾಜ್, ಸಿದ್ದರಾಮ ಡಾಂಗೆ, ಚಂದ್ರಶೇಖರ್, ಹರೀಶ್ ಹಾಗೂ ರೈತ ಮುಖಂಡರಾದ ಮೊದೂರು ಶಿವಣ್ಣ, ಉಂಡವಾಡಿ ಚಂದ್ರೇಗೌಡ, ಕಿರಿಜಾಜೆ ಧನಂಜಯ, ನಂಜುಂಡೇಗೌಡ, ಕೃಷ್ಣಮೂರ್ತಿ, ಮಹದೇವ, ಸತೀಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts