More

    ತಂಬಾಕು ಬೆಲೆ ಕುಸಿತದಿಂದ ಆಕ್ರೋಶಗೊಂಡ ರೈತರು


    ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆಭರವಸೆ ಬಳಿಕ ಅಂತ್ಯ


    ಹನಗೋಡು: ಹರಾಜು ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಆಕ್ರೋಶಗೊಂಡ ಬೆಳೆಗಾರರು ಬುಧವಾರ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಬಳಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಮಾರುಕಟ್ಟೆಯಲ್ಲಿ ಮಂಗಳವಾರ ಕೆಜಿ ತಂಬಾಕಿಗೆ 279 ರೂ. ಇತ್ತು. ಆದರೆ ಬುಧವಾರ ಬೆಳಗಿನಿಂದಲೇ ಉತ್ತಮ ದರ್ಜೆ ತಂಬಾಕು ಕೆಜಿಗೆ 137 ರೂ.ಗೆ ಹರಾಜಾಯಿತು. ಇದರಿಂದ ರೈತರು ಮತ್ತು ತಂಬಾಕು ಮಂಡಳಿ ಅಧಿಕಾರಿಗಳ ನಡುವೆ ಚರ್ಚೆ ನಡೆಯಿತ್ತಾದರೂ ಬೆಲೆ ಏರಿಕೆ ಕಾಣದ ಪರಿಣಾಮ ರೈತರು ಮಧ್ಯಾಹ್ನ ವೇಳೆಗೆ ಮಾರುಕಟ್ಟೆ ಎದುರಿನಲ್ಲೇ ಪ್ರತಿಭಟಿಸಿದರು. ನಂತರ ಹೆದ್ದಾರಿಯಲ್ಲಿ 300 ಕ್ಕೂ ಹೆಚ್ಚು ಬೆಳೆಗಾರರು ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಇರಿಂದಾಗಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರೂ ಮಂಡಳಿ ಅಧಿಕಾರಿಗಳು ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.

    ನಂತರ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯ ಅಧಿಕ್ಷಕ ಡಾ. ಬ್ರಿಜ್‌ಭೂಷಣ್ ಸ್ಥಳಕ್ಕೆ ಭೇಟಿ ಆಗಮಿಸಿ ಮಾತನಾಡಿದ ಅವರು, ಮೈಸೂರಿನ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಯಲ್ಲಿ ಕಂಪನಿಯ ಖರೀದಿದಾರರು( ಟ್ರೇಡರ್ಸ್) ಹಾಗೂ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಂಬಾಕಿಗೆ ನ್ಯಾಯಯುತ ಬೆಲೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದ ಮೇರೆಗೆ ರೈತರು ಪ್ರತಿಭಟನೆಯನ್ನು ಹಿಂಪಡೆದರು.

    ಪ್ರತಿಭಟನೆಯಲ್ಲಿ ಪ್ರಗತಿಪರ ರೈತರಾದ ಮೋಹನ್ ಪ್ರಕಾಶ್, ಅಮರ್, ರಾಜೇಗೌಡ, ಸತೀಶ, ಕೆಂಡಗಣ್ಣ, ಮಾದೇಗೌಡ, ಸ್ವಾಮಿ, ಮಹದೇವ ಇತರರು ಭಾಗವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts