More

    ತಂಬಾಕು ನಾಟಿ ಬಿರುಸು

    ಅರಕಲಗೂಡು: ತಾಲೂಕಿನಲ್ಲಿ ಕೆಲ ದಿನಗಳಿಂದ ಸುರಿದ ಮಳೆಗೆ ರೈತಾಪಿ ವರ್ಗದ ಜನರು ಕೃಷಿ ಚಟುವಟಿಕೆಗಳನ್ನು ಚುರುಗೊಳಿಸಿ ತಂಬಾಕು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.

    ಕೆಲ ದಿನಗಳಿಂದ ತಾಲೂಕಿನ ಹಲವೆಡೆ ಮಳೆ ಅಬ್ಬರಿಸುತ್ತಿದ್ದು ಅನ್ನದಾತರ ಮೊಗದಲ್ಲಿ ಹರ್ಷ ಮೂಡಿಸಿದೆ. ಜಮೀನುಗಳನ್ನು ಉತ್ತು ಹದಗೊಳಿಸಿ ಬಿತ್ತನೆ ಕಾಯಕದಲ್ಲಿ ನಿರತರಾಗಿದ್ದಾರೆ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ನಾಟಿ ಕಾರ್ಯ ಬಿರುಸಾಗಿ ಸಾಗಿದೆ. ಕಳೆದೆರಡು ತಿಂಗಳಿಂದ ಸಸಿ ಮಡಿ ಬೆಳೆಸಿದ್ದ ರೈತರು ಮಳೆಗಾಗಿ ಕಾಯುತ್ತಿದ್ದರು. ಈ ಬಾರಿ ಏಪ್ರಿಲ್ ತಿಂಗಳು ಕಳೆಯುತ್ತಾ ಬಂದರೂ ಪೂರ್ವ ಮುಂಗಾರು ಕೃಪೆ ತೋರದೆ ನಿರಾಶೆಗೊಂಡಿದ್ದ ಬೆಳೆಗಾರರಿಗೆ ಇದೀಗ ಬೀಳುತ್ತಿರುವ ಮಳೆ ಬಿತ್ತನೆಗೆ ವರದಾನವಾಗಿದೆ.

    ಹೆಚ್ಚಿನದಾಗಿ ತಂಬಾಕು ಉತ್ಪಾದಿಸುವ ರಾಮನಾಥಪುರ, ಕೊಣನೂರು, ಹಳ್ಳಿಮೈಸೂರು ಹೋಬಳಿಯಲ್ಲಿ ರೈತರು ತಂಬಾಕು ನಾಟಿಗೆ ಮುಂದಾಗಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಇನ್ನು ಕೆಲವೆಡೆ ನಾಟಿಗೆ ಜಮೀನು ಸಿದ್ದಪಡಿಸಿಕೊಳ್ಳುವತ್ತ ನಿರತರಾಗಿದ್ದಾರೆ. ನೀರಾವರಿ ವ್ಯಾಪ್ತಿಯ ಜಮೀನಿನಲ್ಲಿ ಮೊದಲ ಹಂತದಲ್ಲಿ ನಾಟಿ ಮಾಡಿದ್ದ ಗಿಡಗಳು ಕೆಲವೆಡೆ ಮಳೆ ಅಬ್ಬರಕ್ಕೆ ಹಾನಿಗೀಡಾಗಿವೆ. ಹೀಗಾಗಿ ರೈತರು ಮತ್ತೆ ಮರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts