More

    ತಂತ್ರಜ್ಞಾನದ ಬದಲಾವಣೆಗೆ ಹೊಂದಿಕೊಳ್ಳುವುದು ಅಗತ್ಯ

    ಕಾರವಾರ: ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಆಗುವಂತಹ ಬದಲಾವಣೆಯೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂದು ಕಾರವಾರ ಆರ್​ಎಫ್​ಒ ಜಿ.ವಿ. ನಾಯ್ಕ ಅಭಿಪ್ರಾಯಪಟ್ಟರು.

    ನಗರದ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಡಾ. ವಿ.ಎನ್. ನಾಯಕ ಮಾತನಾಡಿ, ವಿಜ್ಞಾನಿಗಳಾಗಬೇಕಾದರೆ ಮೂಲ ವಿಜ್ಞಾನ ತಿಳಿದುಕೊಂಡು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

    ಕೇಂದ್ರದ ಕ್ಯುರೇಟರ್ ಡಾ. ಸಂಜೀವ ದೇಶಪಾಂಡೆ ಸ್ವಾಗತಿಸಿದರು. ಭಾಗ್ಯಶ್ರೀ ನಾಯ್ಕ ವಂದಿಸಿದರು. ಕವಿತಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ರಾವ್ ಇವರು ನಿರ್ದೇಶಿಸಿದ ದ ಕ್ಲೈಮೆಟ್ ಚೇಂಜ್ ಎಂಬ ವಿಜ್ಞಾನ ಚಲನಚಿತ್ರವನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

    ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಮೆಡಲ್: ಕಾರವಾರ ರೋಟರಿ ಕ್ಲಬ್ ಹಾಗೂ ರೋಟರ್ಯಾಕ್ಟ್ ಕ್ಲಬ್​ನಿಂದ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾರವಾರ ಮೆಡಿಕಲ್ ಕಾಲೇಜ್​ನ ಯಶ್ ಬಾಂದೇಕರ ಮತ್ತು ಶುಭಂ ಕುಮಾರ ಪ್ರಥಮ ಸ್ಥಾನ ಪಡೆದುಕೊಂಡರು. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ನಗರದ 8 ಕಾಲೇಜ್​ಗಳ 26 ತಂಡಗಳ 52 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಿವಾಜಿ ಕಾಲೇಜ್​ನ ಕಾರ್ತಿಕ ನಾಯ್ಕ ಮತ್ತು ದರ್ಶನ ಸಾವಂತ ದ್ವಿತೀಯ ಸ್ಥಾನ ಪಡೆದರು. ಜುನೇದ ಸೈಯದ್ ಕ್ವಿಜ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು.ರೋಟರ್ಯಾಕ್ಟ್ ಅಧ್ಯಕ್ಷ ಕಾರ್ತಿಕ ತಾಂಡೇಲ, ಸದಸ್ಯರಾದ ವಿಲ್ಮಾ, ರಾಚೆಲ್, ರಜತ್, ಕುಣಾಲ್, ಅವಿನಾಶ, ಅಭಿಶೇಕ, ಮಂಜುನಾಥ, ಮಂಜು, ಕೆರೋಲ್ ಕಾರ್ಯಕ್ರಮಕ್ಕೆ ಸಹಕರಿಸಿದರು. ರೋಟರಿ ಅಧ್ಯಕ್ಷ ನಾಗರಾಜ ಜೋಶಿ, ಶೈಲೇಶ ಹಳದೀಪುರ, ರಾಘವೇಂದ್ರ ಪ್ರಭು, ಅಮರನಾಥ ಶೆಟ್ಟಿ, ಮಿನಿನ್ ಪುಡ್ತಾಡೊ,ನರೇಂದ್ರ ದೇಸಾಯಿ, ಪ್ರಸನ್ನ ತೆಂಡುಲ್ಕರ್ ಉಪಸ್ಥಿತರಿದ್ದರು.

    ಶೈಕ್ಷಣಿಕ ಜಿಲ್ಲೆಯ 30 ತಂಡಗಳು ಭಾಗಿ: ಆರು ವಿಷಯಗಳಿಗೆ ಸಂಬಂಧಿಸಿದಂತೆ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲೂಕುಗಳ 30 ತಂಡಗಳು ಭಾಗವಹಿಸಿದ್ದವು. ಭಟ್ಕಳದ ಆನಂದ ಆಶ್ರಮ ಶಾಲೆ ಐದು ವಿಷಯಗಳಲ್ಲಿ ಮೊದಲ ಬಹುಮಾನ ಪಡೆಯಿತು. ಕಾರವಾರದ ಸೇಂಟ್ ಮೈಕಲ್ಸ್ ಕಾನ್ವೆಂಟ್​ನ ಸ್ಪರ್ಧಿಗಳು ಒಂದು ವಿಭಾಗದಲ್ಲಿ ಮೊದಲ ಬಹುಮಾನ ಪಡೆದರು. ಎರಡನೆಯ ಬಹುಮಾನವನ್ನು ಕಾರವಾರ ಬಾಲಮಂದಿರ ಪ್ರೌಢಶಾಲೆ, ಅಂಕೋಲಾ ಕಿತ್ತೂರು ರಾಣಿ ವಸತಿ ಶಾಲೆ, ಕುಮಟಾ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್, ನಿರ್ಮಲಾ ಕಾನ್ವೆಂಟ್ ಸ್ಕೂಲ್ ಕುಮಟಾ,ಸೇಂಟ್ ಜೋಸೆಫ್ ಪ್ರೌಢಶಾಲೆಗಳು ಪಡೆದುಕೊಂಡವು. ಮೂರನೆಯ ಬಹುಮಾನವನ್ನು ಕುಮಟಾದ ನಿರ್ಮಲಾ ಕಾನ್ವೆಂಟ್ ಸ್ಕೂಲ್, ಕಾರವಾರದ ನ್ಯೂ ಹೈಸ್ಕೂಲ್ ಬಾಡ, ಅಂಕೋಲಾದ ಪಿ.ಎಂ. ಹೈಸ್ಕೂಲ್, ಹೊನ್ನಾವರ ಮಾಥೋಮಾ ಆಂಗ್ಲ ಮಾಧ್ಯಮ ಶಾಲೆ, ಅಂಕೋಲಾದ ಜೈಹಿಂದ್ ಹೈಸ್ಕೂಲ್, ವಿ.ಕೆ.ಸಿ. ಗಲ್ಸ್ ರ್್ಕೂಲ್ , ಹಾಗೂ ಸರ್ಕಾರಿ ಪ್ರೌಢಶಾಲೆ ತಂಡಗಳು ಪಡೆದುಕೊಂಡವು.

    ಸೈಲ್ ಕಾಲೇಜ್​ನಲ್ಲಿ ಆಚರಣೆ: ಕಾರವಾರ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ತಾಲೂಕಿನ ಗಿರಿಜಾಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ವಿದ್ಯಾರ್ಥಿಗಳಿಗೆ ಪೋಸ್ಟರ್ ತಯಾರಿಕೆ ಹಾಗೂ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ರಸಪ್ರಶ್ನೆಯಲ್ಲಿ ಆನಂದ ಎಂ., ಸಾಯೀಶ ನಾಯ್ಕ ಮೊದಲ, ಪವನ ದೇಸಾಯಿ, ಸಾಗರ ಎನ್. ಬ್ರೇವನ್ ಪೆರೇರಾ, ಡಾವ್ಸನ್ ಫರ್ನಾಂಡೀಸ್, ಅಭಿಷೇಕ ರಾಣೆ, ಸೊಹೇಲ್ ಸೈಯದ್ ಎರಡನೆಯ, ಕ್ಲಾರೆನ್ಸ್, ಅಲೋಯಿಸ್, ಜಾಸಸ್ ಹಾಗೂ ಜೋವಿಟೊ ಮೂರನೇ ಬಹುಮಾನ ಪಡೆದರು. ಉಪನ್ಯಾಸಕರಾದ ಸೂರಜ್ ಡಿ., ಮಲ್ಲಿಕಾ ಹಾಗೂ ಡಾ. ಸುರೇಶ ಮಾನೆ ಕ್ವಿಜ್ ಮಾಸ್ಟರ್​ಗಳಾಗಿದ್ದರು. ಮನೀಶ್ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು. ಪೂಜೇಶ್ ಅಣ್ವೇಕರ್,ಮಂಜುನಾಥ ಜಿ.ಪಿ.ಹಾಗೂ ಸುಧೀರ ಪಾವಸ್ಕರ್ ಸ್ಪರ್ಧೆ ಸಂಯೋಜಿಸಿದರು. ಪ್ರಾಚಿ ಕುಡ್ತಲಕರ್, ರುವೆನಾ ಪೆರೇರಾ ಹಾಗೂ ಆಯೇಷಾ ಮುಲ್ಲಾ ಪೋಸ್ಟರ್ ಮೇಕಿಂಗ್ ಸ್ಪರ್ಧೆಯ ಬಹುಮಾನ ಪಡೆದರು. ಉಪನ್ಯಾಸಕರಾದ ಸ್ವಾತಿ ಕಲ್ಗುಟ್ಕರ್​ವುತ್ತು ಮಲ್ಲಿಕಾ ಉಳ್ವೇಕರ್​ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts