More

    ಡೇಟಿಂಗ್ ಆಸೆಗೆ ಬಿದ್ದವನಿಗೆ 80 ಸಾವಿರ ರೂ. ದೋಖಾ !

    ಬೆಂಗಳೂರು: ಯುವತಿಯರ ಜತೆ ಡೇಟಿಂಗ್ ಸರ್ವೀಸ್ ಕೊಡುವುದಾಗಿ ಖಾಸಗಿ ಕಂಪನಿ ಉದ್ಯೋಗಿಯನ್ನು ನಂಬಿಸಿದ ಸೈಬರ್ ವಂಚಕರು, 80 ಸಾವಿರ ರೂ. ಲಪಟಾಯಿಸಿದ್ದಾರೆ.

    ಖಾಸಗಿ ಕಂಪನಿ ಉದ್ಯೋಗಿ ಜಯನಗರದ ನಿವಾಸಿ ವಿನಾಯಕ್ ಕಳೆದ ಸೆ.29ರಂದು ಡೇಟಿಂಗ್ ವೆಬ್‌ಸೈಟ್‌ವೊಂದಕ್ಕೆ ಭೇಟಿ ನೀಡಿ ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಅಪರಿಚಿತರು ನಿಮಗೆ ವಿವಿಧ ಯುವತಿಯರ ಜತೆ ಡೇಟಿಂಗ್ ಸರ್ವೀಸ್ ಕೊಡುವುದಾಗಿ ಹೇಳಿದ್ದರು. ಆದರೆ, ಇದಕ್ಕೂ ಮೊದಲು ಗೂಗಲ್ ಪೇ ಅಥವಾ ಪೇಟಿಎಮ್ ಮೂಲಕ ನಮ್ಮ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಸೂಚಿಸಿದ್ದರು. ಆರೋಪಿಗಳ ಮಾತಿಗೆ ಮರುಳಾಗಿ ಅವರು ನೀಡಿದ ನಂಬರ್‌ಗೆ ಗೂಗಲ್ ಪೇ ಮೂಲಕ ಸ್ವಲ್ಪ ಹಣ ಹಾಕಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಪರಿಚಿತರು ವಿವಿಧ ಆಮೀಷವೊಡ್ಡಿ ವಿನಾಯಕ್ ಅವರಿಂದ ಹಂತ-ಹಂತವಾಗಿ ಒಟ್ಟು 80 ಸಾವಿರ ರೂ.ನ್ನು ತಮ್ಮಖಾತೆಗೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಡೇಟಿಂಗ್ ಸರ್ವೀಸ್‌ನ್ನೂ ಕೊಡದೇ, ಹಣವನ್ನೂ ಹಿಂತಿರುಗಿಸದೇ ಮೊಬೈಲ್ ಸುಚ್ಡ ಆ್ ಮಾಡಿಕೊಂಡಿದ್ದಾರೆ ಎಂದು ವಿನಾಯಕ್ ದೂರಿನಲ್ಲಿ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts